• 25 ಜನವರಿ 2025

ವಿದೇಶದಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿ ಊರಿಗೆ ಬಂದಾಗ ಹೃದಯಘಾತದಿಂದ ನಿಧನ

 ವಿದೇಶದಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿ ಊರಿಗೆ ಬಂದಾಗ ಹೃದಯಘಾತದಿಂದ ನಿಧನ
Digiqole Ad

ವಿದೇಶದಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿ ಊರಿಗೆ ಬಂದಾಗ ಹೃದಯಘಾತದಿಂದ ನಿಧನ

ವಿದೇಶದಲ್ಲಿ ಉದ್ಯೋಗದಲ್ಲಿ ಇದ್ದು ರಜೆಯಲ್ಲಿ ಊರಿಗೆ ಬಂದಿದ್ದ ಯುವಕ ಹೃದಯಾಘಾತದಿಂದ ನಿಧನರಾದ ಘಟನೆ ವರದಿಯಾಗಿದೆ.

ಕಡಬ ತಾಲೂಕು ಚಾರ್ವಾಕ ಗ್ರಾಮದ ದೇವಿನಗರ ನಿವಾಸಿ ದೇಜಪ್ಪ ಯಾನೆ ದಿವೀಶ್ ಮಡಿವಾಳ (45 ವ.) ಎಂಬವರು ಡಿ.16ರಂದು ಹೃದಯಾಘಾತಕ್ಕೆ ಒಳಗಾಗಿ ನಿಧನ ಹೊಂದಿದವರು.

ಮೂಲತಃ ಚಾರ್ವಾಕದವರಾದ ಅವರು ಪುತ್ತೂರಿನ ಸಂಪ್ಯದಲ್ಲಿ ಮನೆ ಮಾಡಿದ್ದರು .ಅವರು ಚಾರ್ವಾಕದ ತಮ್ಮ ಮೂಲ ಮನೆಯಲ್ಲಿ ನಡೆದ ಕಾರ್ಯಕ್ರಮದ ನಿಮಿತ್ತ ಅಲ್ಲಿಗೆ ಬಂದವರು ವಾಪಸ್ ರಾತ್ರಿಯೇ ಪುತ್ತೂರಿಗೆ ಬಂದಿದ್ದರು.ಬೆಳಗ್ಗಿನ ವೇಳೆ ಹೃದಯಾಘಾತವಾದ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರು ತಂದೆ, ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವನ್ನು ಅಗಲಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ