• 25 ಜನವರಿ 2025

ಸಂಘಟಕ ಶ್ರೀ ಜಿ. ಲಿಂಗದೇವರು ತುಮಕೂರು ಜಿಲ್ಲಾಧ್ಯಕ್ಷರಾಗಿ ಆಯ್ಕೆ.

 ಸಂಘಟಕ ಶ್ರೀ ಜಿ. ಲಿಂಗದೇವರು ತುಮಕೂರು ಜಿಲ್ಲಾಧ್ಯಕ್ಷರಾಗಿ ಆಯ್ಕೆ.
Digiqole Ad

ಸಂಘಟಕ ಶ್ರೀ ಜಿ. ಲಿಂಗದೇವರು ತುಮಕೂರು ಜಿಲ್ಲಾಧ್ಯಕ್ಷರಾಗಿ ಆಯ್ಕೆ
ಕಾಸರಗೋಡು : ಸಂಘಟಕ ಸಮಾಜಸೇವಕ, ಕನ್ನಡ ಮುಂದಾಳು, ಶ್ರೀ ಜಿ. ಲಿಂಗದೇವರು ಚಿಕ್ಕನಾಯಕನಹಳ್ಳಿ, ಇವರನ್ನು ಕೇರಳ ರಾಜ್ಯದ ಕನ್ನಡ ಭವನದ ಕರ್ನಾಟಕ ರಾಜ್ಯ ತುಮಕೂರು ಜಿಲ್ಲೆಯ ಕನ್ನಡ ಭವನ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಕಾಸರಗೋಡು ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ನಾಮ ನಿರ್ದೇಶನ ಮಾಡಿದರು. ಕನ್ನಡ ಭವನದ ನಿರ್ದೇಶಕರಾದ ಸಿ. ವೈ. ಮೆಣಸಿನಕಾಯಿ ಅನುಮೋದಿಸಿದರು. ಸರ್ವಾನುಮತಿಯೊಂದಿಗೆ ಆಯ್ಕೆಯಾದ ಶ್ರೀ ಜಿ.ಲಿಂಗದೇವರು ಅವರು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕನ್ನಡ ಭವನ ಉಚಿತ ವಸತಿ ಸೌಕರ್ಯ ಹಾಗೂ “ರಜತ ಸಂಭ್ರಮ ” ವಿಶೇಷ ಕಾರ್ಯಕ್ರಮಗಳ ಸಂಘಟನೆ, “ಮನೆಗೊಂದು ಗ್ರಂಥಾಲಯ “ಪುಸ್ತಕವೇ ಸತ್ಯ I -ಪುಸ್ತಕವೇ ನಿತ್ಯ. ಮೊದಲಾದ ವಿನೂತನ ಕಾರ್ಯಕ್ರಮಗಳ ಜವಾಬ್ದಾರಿ ವಹಿಸಿ ಘಟಕವನ್ನು ವಿಸ್ತರಿಸಿ ಕಾರ್ಯ ಪ್ರವೀತ್ತರಾಗಬೇಕೆಂದು ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಮತ್ತು ಸಂಚಾಲಕಿಯಾದ ಶ್ರಿಮತಿ ಸಂದ್ಯಾ ರಾಣಿ ಟೀಚರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ