• 25 ಜನವರಿ 2025

ಕುಂಬಳೆಯ ಸೂಪರ್ ಮಾರ್ಕೆಟ್‌ಗೆ ನುಗ್ಗಿದ ಕಾಡುಹಂದಿ – ಬೆಚ್ಚಿಬಿದ್ದ ಸಿಬ್ಬಂದಿ

 ಕುಂಬಳೆಯ ಸೂಪರ್ ಮಾರ್ಕೆಟ್‌ಗೆ ನುಗ್ಗಿದ ಕಾಡುಹಂದಿ – ಬೆಚ್ಚಿಬಿದ್ದ ಸಿಬ್ಬಂದಿ
Digiqole Ad

ಕುಂಬಳೆಯ ಸೂಪರ್ ಮಾರ್ಕೆಟ್‌ಗೆ ನುಗ್ಗಿದ ಕಾಡುಹಂದಿ – ಬೆಚ್ಚಿಬಿದ್ದ ಸಿಬ್ಬಂದಿ

ಮಂಗಳೂರು: ಗಡಿಭಾಗದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಕಾಡುಹಂದಿಯೊಂದು ಸೂಪರ್ ಮಾರ್ಕೆಟ್‌ಗೆ ನುಗ್ಗಿದ ಅಚ್ಚರಿ ಘಟನೆಯು ಮಂಗಳವಾರ ರಾತ್ರಿ ನಡೆದಿದೆ.

ಕುಂಬಳೆ ಪೇಟೆಯಲ್ಲಿರುವ “ಸೂಪರ್ ಪಾಯಿಂಟ್ ಹೈಪರ್ ಮಾರ್ಕೆಟ್” ಮಂಗಳವಾರ ರಾತ್ರಿ 9 ಗಂಟೆಯ ಸುಮಾರಿಗೆ ಈ ಅಪ್ರತೀಕ್ಷಿತ ಘಟನೆ ನಡೆದಿದೆ. ಈ ಸಮಯದಲ್ಲಿ ಮಾರ್ಕೆಟ್‌ನೊಳಗೆ ಕೆಲವೇ ಗ್ರಾಹಕರು ಮತ್ತು ಸಿಬ್ಬಂದಿ ಇದ್ದರು.

ಕಾಡುಹಂದಿ ಹಠಾತ್‌ನಲ್ಲಿ ಮಾರ್ಕೆಟ್‌ಗೆ ಪ್ರವೇಶಿಸಿದ್ದು, ಸಿಬ್ಬಂದಿ ಹಾಗೂ ಗ್ರಾಹಕರಲ್ಲಿ ಗಲಿಬಿಲಿ ಉಂಟಾಯಿತು. ಘಟನೆಯ ವೇಳೆ ಕಾಡುಹಂದಿಯು ಯಾವ ಪ್ರಕಾರದ ಹಾನಿಯನ್ನೂ ಮಾಡದೆ, ಕೆಲ ಕ್ಷಣಗಳಲ್ಲಿ ತಕ್ಷಣವೇ ಹೊರಗೆ ಓಡಿ ಹೋಗಿದೆ. ಹಂದಿ ನಂತರ ಶಾಲಾ ರಸ್ತೆಯತ್ತ ಪರಾರಿಯಾಗಿದೆ ಎಂದು ವರದಿಯಾಗಿದೆ.

ಈ ಘಟನೆ ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದ್ದು, ಅರಣ್ಯ ಪ್ರದೇಶಗಳಿಗೆ ಹತ್ತಿರವಿರುವ ಜನವಸತಿಗಳಲ್ಲಿ ಕಾಡುಪ್ರಾಣಿಗಳ ಅಟ್ಟಹಾಸವು ಹೆಚ್ಚುತ್ತಿರುವುದನ್ನು ಗಮನಕ್ಕೆ ತರುತ್ತಿದೆ.

ಸ್ಥಳೀಯರ ಮನವಿ: ಜನವಸತಿ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಪ್ರವೇಶ ತಡೆಯಲು ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂಬದು ಸ್ಥಳೀಯರ ಒತ್ತಾಯವಾಗಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ