ಕಡಬ:ಬಿಳಿನೆಲೆ ವಲಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯಿಂದ ಶೃಧ್ಧಾಕೇಂದ್ರಗಳ ಸ್ವಚ್ಚತೆ ಕಾರ್ಯಕ್ರಮ

ಕಡಬ:ಬಿಳಿನೆಲೆ ವಲಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯಿಂದ ಶೃಧ್ಧಾಕೇಂದ್ರಗಳ ಸ್ವಚ್ಚತೆ ಕಾರ್ಯಕ್ರಮ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಮಕರ ಸಂಕ್ರಾಂತಿ ಹಬ್ಬದ ಪೂರ್ವದಲ್ಲಿ ಧಾರ್ಮಿಕ ಶೃದ್ದಾಕೇಂದ್ರಗಳನ್ನು ಸ್ವಚ್ಚತೆಗೊಳಿಸಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿಳಿನೆಲೆ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರುಗಳು ದೇವಸ್ಥಾನ , ದೈವಸ್ಥಾನ, ಭಜನಾ ಮಂದಿರಗಳ ಆಡಳಿತ ಮಂಡಳಿ ಮತ್ತು ಭಕ್ತಾದಿಗಳ ಸಹಕಾರದೊಂದಿಗೆ ಸುಮಾರು ಐನೂರು ಜನರ ಪಾಲ್ಗೊಳ್ಳುವಿಕೆಯಲ್ಲಿ ಬಿಳಿನೆಲೆ ವಲಯದ ಆರು ದೇವಸ್ಥಾನ , ಎರಡು ದೈವಸ್ಥಾನ ಮತ್ತು ನಾಲ್ಕು ಭಜನಾ ಮಂದಿರಗಳಲ್ಲಿ ಒಳಾಂಗಣ ಹಾಗೂ ಹೊರಾಂಗಣ ಸ್ವಚ್ಚತೆ ಕಾರ್ಯಕ್ರಮವು ನಡೆಯಿತು.
ವಲಯದ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ಸಂಘಟಿಸಿ ಶೃದ್ಧಾ ಕೇಂದ್ರ ದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು .ವಲಯದ ಒಕ್ಕೂಟದ ಅಧ್ಯಕ್ಷರುಗಳು, ವಲಯದ ಸೇವಾಪ್ರತಿನಿಧಿಗಳು ಮತ್ತು ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರುಗಳು ಸಹಕರಿಸಿದರು.ಶೃಧ್ಧಾಕೇಂದ್ರದ ಸ್ವಚ್ಚತೆ ಕಾರ್ಯಕ್ರಮದ ಬಗ್ಗೆ ಶೃಧ್ಧಾಕೇಂದ್ರಗಳ ಆಡಳಿತ ಸಮಿತಿಯವರು ಮೆಚ್ಚುಗೆ ವ್ಯಕ್ತಪಡಿಸಿ ಪೂಜ್ಶರ ದೂರದಷ್ಟಿತ್ವದ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಕ್ಕೆ ಧನ್ಯವಾದವನ್ನು ಸಲ್ಲಿಸಿದರು.