• 10 ಫೆಬ್ರವರಿ 2025

ಕಡಬ: ಧರ್ಮಸ್ಥಳ ಯೋಜನೆಯ ಬಿಳಿನೆಲೆ ವಲಯದಲ್ಲಿ ಹೊಸ ವರ್ಷದ ಡೈರಿ ವಿತರಣಾ ಕಾರ್ಯಕ್ರಮ

 ಕಡಬ: ಧರ್ಮಸ್ಥಳ ಯೋಜನೆಯ ಬಿಳಿನೆಲೆ ವಲಯದಲ್ಲಿ ಹೊಸ ವರ್ಷದ ಡೈರಿ ವಿತರಣಾ ಕಾರ್ಯಕ್ರಮ
Digiqole Ad

ಕಡಬ: ಧರ್ಮಸ್ಥಳ ಯೋಜನೆಯ ಬಿಳಿನೆಲೆ ವಲಯದಲ್ಲಿ ಹೊಸ ವರ್ಷದ ಡೈರಿ ವಿತರಣಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಅಧ್ಯಕ್ಷರುಗಳಿಗೆ 2025ನೇ ಹೊಸ ವರ್ಷದ ಡೈರಿಯ ವಿತರಣಾ ಕಾರ್ಯಕ್ರಮವು ಮರ್ಧಾಳ ವಲಯ ಕಛೇರಿಯಲ್ಲಿ ನಡೆಯಿತು.

ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆಯವರು ಒಕ್ಕೂಟದ ಅಧ್ಯಕ್ಷರುಗಳಿಗೆ ವಲಯದ ಸೇವಾ ಪ್ರತಿನಿಧಿಗಳಿಗೆ ಹಾಗೂ ಶೌರ್ಯ ಘಟಕದ ಘಟಕ ಪ್ರತಿನಿಧಿಯವರಿಗೆ ಹೊಸ ವರ್ಷದ ಡೈರಿಯನ್ನು ವಿತರಿಸಿ ಮಾತನಾಡಿ 2024ನೇ ವರ್ಷದಲ್ಲಿ ಬಿಳಿನೆಲೆ ವಲಯದಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘಗಳಲ್ಲಿ ಆಗಿರುವ ಅಭಿವಧ್ಧಿ ಕಾರ್ಯಕ್ರಮಗಳು, ಒಕ್ಕೂಟದ ನಿರ್ವಹಣೆಯಲ್ಲಿ ಒಕ್ಕೂಟದ ಅಧ್ಯಕ್ಷರುಗಳು ತೊಡಗಿಸಿಕೊಳ್ಳುವಿಕೆ, ಸೇವಾಪ್ರತಿನಿಧಿಗಳಿಗೆ ಯೋಜನೆಯಿಂದ ನೀಡಿದ ಜವಾಬ್ದಾರಿಗಳ ಸಮರ್ಪಕ ನಿರ್ವಹಣೆ ˌ ಮಾರ್ಚ್ ಅಂತ್ಯದೊಳಗೆ ವಲಯದಲ್ಲಿ ನಡೆಸಬೇಕಾದ ಅತೀ ಅಗತ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕೇಂದ್ರ ಒಕ್ಕೂಟ ಸಮಿತಿ ಹಾಗೂ ಬಿಳಿನೆಲೆ ವಲಯ ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಕೇನ್ಯ ರವರು 2025 ಹೊಸವರ್ಷಕ್ಕೆ ಸಿಹಿ ಹಂಚಿ ಶುಭಾಶಯ ಕೋರಿದರು.

 ತಾಲೂಕು ಶೌರ್ಯಘಟಕದ ಕ್ಯಾಪ್ಟನ್ ಬಿಳಿನೆಲೆ ವಲಯ ಮರ್ದಾಳ ಘಟಕದ ಘಟಕ ಪ್ರತಿನಿಧಿ ಭವಾನಿಶಂಕರ್ ಹೊಸ ವರ್ಷಕ್ಕೆ ಎಲ್ಲರಿಗೂ ಶುಭಾಶಯ ತಿಳಿಸಿದರು. ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರುಗಳಾದ ಧರ್ಮಪಾಲ ಕೈಕಂಭ ˌ ಶಿವಕುಮಾರ್ ಕೊಡಿಂಬಾಳ ˌಧರ್ಮಪಾಲ ಕೊಂಬಾರು ˌಸತೀಶ್ಚಂದ್ರ ರೈ ಬಂಟ್ರ, ಪದ್ಮಾವತಿ ಶಿರಿಬಾಗಿಲು ಹಾಗೂ ರಾಜೇಶ್ ಬಿಳಿನೆಲೆ ಸೇವಾ ಪ್ರತಿನಿಧಿಗಳಾದ ದಿನೇಶ್ ನೆಕ್ಕಿಲಾಡಿ ,ನೇತ್ರ ಬಂಟ್ರ, ಜ್ಞಾನಸೇಲ್ವೀ ಕೋಡಿಂಬಾಳ ,ಗಣೇಶ್ ಕೊಂಬಾರು, ರೇಖಾ ಸುಳ್ಯˌ ವಿನೋದ್ ಕುಮಾರ್ ಶಿರಿಬಾಗಿಲು ˌ ಹಾಗೂ ಸಿ ಯಸ್ ಸಿ ನಿರ್ವಹಕಿ ಕು|| ನಿಶಾ ಕೊಣಾಜೆ ಉಪಸ್ಥಿತರಿದ್ದರು. ಬಿಳಿನೆಲೆ ಸೇವಾಪ್ರತಿನಿಧಿ ಸತೀಶ್ ಆಜಾನ ಸ್ವಾಗತಿಸಿ ಕೊಣಾಜೆ ಸೇವಾಪ್ರತಿನಿಧಿ ಬೇಬಿ ವಂದಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ