ಭಾರತೀಯ ಜನತಾ ಪಾರ್ಟಿ, ಸುಳ್ಯ ಮಂಡಲ ಮಹಿಳಾ ಮೋರ್ಚಾ ಮಹಿಳೆಯರು ಸಶಕ್ತರಾಗಿ ಒಗ್ಗಟ್ಟಾಗಿ ಪಕ್ಷ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಸಮಾಜದಲ್ಲಿ ಮಹತ್ತರ ಬದಲಾವಣೆ ಸಾಧ್ಯ
ಭಾರತೀಯ ಜನತಾ ಪಾರ್ಟಿ, ಸುಳ್ಯ ಮಂಡಲ ಮಹಿಳಾ ಮೋರ್ಚಾಮ
ಹಿಳೆಯರು ಸಶಕ್ತರಾಗಿ ಒಗ್ಗಟ್ಟಾಗಿ ಪಕ್ಷ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಸಮಾಜದಲ್ಲಿ ಮಹತ್ತರ ಬದಲಾವಣೆ ಸಾಧ್ಯ
ಲಕಿತ ಶೆಟ್ಟಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಳ್ಯ ಮಂಡಲ ಕಾರ್ಯನಿರ್ವಹಣಾ ಸಭೆಯನ್ನು ಉದ್ದೇಶಿಸಿ ನುಡಿದರು.
ಸಭೆಯು ಸುಳ್ಯ ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ. ಬಿ ಕೆ ಅಧ್ಯಕ್ಷತೆಯಲ್ಲಿ ನಡೆಯಿತು.ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಸುಳ್ಯ ಮಂಡಲ ಮಹಿಳಾ ಮೋರ್ಚಾ ಪ್ರಭಾರಿ ಯಶಸ್ವಿನಿ ಶಾಸ್ತ್ರಿ,ಮಂಡಲದ ಮಹಿಳಾ ಮೋರ್ಚಾ ಜಿಲ್ಲಾ ಸಮಿತಿ ಕಾರ್ಯದರ್ಶಿ ಜಾನ್ಹವಿ ಕಾಂಚೋಡು,ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಶಿಕಲಾ. ಏ, ಲೋಲಾಕ್ಷಿ ದಾಸನ ಕಜೆ,ಕಾರ್ಯದರ್ಶಿಗಳಾದ ಭಾರತಿ ಪುರುಷೋತ್ತಮ್, ಆಶಾ ರೈ ಕಲಾಯಿ , ಸದಸ್ಯರುಗಳಾದ ಮೋಹಿನಿ ಕಟ್ಟ,ಶಕುಂತಳಾ ಕೇವಳ, ಸುಮತಿ ಜಯನಗರ, ದಿವ್ಯಾ ಪೆರಾಲು, ದಿವ್ಯಾ ಮಡಪ್ಪಾಡಿ,ಸುಜಾತಾ ಐ ವರ್ನಾಡು ಉಪಸ್ಥಿತರಿದ್ದರು.
ಈ ಸಂಧರ್ಭ ಕೊಲ್ಲ ಮೋಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆ ಯಾದ ಮೋಹಿನಿ ಕಟ್ಟ ಇವರನ್ನು ಗೌರವಿಸಲಾಯಿತು. ಹಾಗೂ ಸಾವಯವ ಕೃಷಿ ಸಲುವಾಗಿ ಆಶಾ ರೈ ಇವರು ಎರೆಹುಳು ಗೊಬ್ಬರದ ಬಗ್ಗೆ ಮಾಹಿತಿ ನೀಡಿದರು. ಲೋಲಾಕ್ಷಿ ಸ್ವಾಗತಿಸಿ ಭಾರತೀಪುರುಷೋತ್ತಮ್ ಧನ್ಯವಾದ ಇತ್ತರು.