• 15 ಫೆಬ್ರವರಿ 2025

ಕುದ್ಮಾರು: ಸಂಸಾರ ತಂಡದಿಂದ ಆರೋಗ್ಯ ಜಾಗೃತಿಯ ಬಗ್ಗೆ ಬೀದಿ ನಾಟಕ

 ಕುದ್ಮಾರು: ಸಂಸಾರ ತಂಡದಿಂದ ಆರೋಗ್ಯ ಜಾಗೃತಿಯ ಬಗ್ಗೆ ಬೀದಿ ನಾಟಕ
Digiqole Ad

ಕುದ್ಮಾರು: ಸಂಸಾರ ತಂಡದಿಂದ ಆರೋಗ್ಯ ಜಾಗೃತಿಯ ಬಗ್ಗೆ ಬೀದಿ ನಾಟಕ

ಪುತ್ತೂರು ತಾಲೂಕಿನ ಇನ್ಸ್ಟಿಟ್ಯೂಟ್ ಆಫ್ ಗ್ಲೋಬಲ್ ಡೆವೆಲಪ್ಮೆಂಟ್ ಇದರ ನೇತೃತ್ವದಲ್ಲಿ “ಸಂಸಾರ” (ಸಂಘಟನೆಗಾಗಿ ಸಾಮಾಜಿಕ ರಂಗಭೂಮಿ) ಕಲಾತಂಡದವರ ವತಿಯಿಂದ “ಅಯೋಡಿನ್ ಕೊರತೆ ಮತ್ತು ಪೋಷಕಾಂಶಗಳು” ಎಂಬ ವಿಷಯದ ಕುರಿತು ಬೀದಿನಾಟಕ ಪ್ರದರ್ಶನವು ಜ 15ರಂದು ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದ್ಮಾರು ಶಾಲೆ ಬಳಿ ನಡೆಯಿತು.

ಈ ಸಂದರ್ಭದಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ತಾರಾ ಅನ್ಯಾಡಿ, ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಲಕ್ಷ್ಮೀ,ಆಶಾ ಕಾರ್ಯಕರ್ತೆಯರಾದ ಯಮುನಾ,ತಾರಾ,ಕುದ್ಮಾರು ಅಂಗನವಾಡಿ ಕಾರ್ಯಕರ್ತೆ ವಸಂತಿ,ಕುದ್ಮಾರು ಶಾಲಾ ಮುಖ್ಯ ಗುರುಗಳಾದ ಕುಶಾಲಪ್ಪ,ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಐ ಜಿ ಡಿ ಇದರ ಸದಸ್ಯೆ ಪ್ರಜ್ಞಾ ಸ್ವಾಗತಿಸಿ ಬೆಳಂದೂರು ಗ್ರಾಮ ಪಂಚಾಯತ್ ಲೆಕ್ಕ ಸಹಾಯಕಿ ಸುನಂದಾ ಅವರು ವಂದಿಸಿದರು.ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ