ನಮ್ಮ ಮೆಟ್ರೋ ಮತ್ತು ಸರ್ಕಾರಿ ಬಸ್ ದರ ಏರಿಕೆ: ಗ್ರೀನ್‌ಪೀಸ್ ಇಂಡಿಯಾ ಖಂಡನೆ


ನಮ್ಮ ಮೆಟ್ರೋ ಮತ್ತು ಸರ್ಕಾರಿ ಬಸ್ ದರ ಏರಿಕೆ: ಗ್ರೀನ್‌ಪೀಸ್ ಇಂಡಿಯಾ ಖಂಡನೆ
ಬೆಂಗಳೂರು: ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆಯು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪ್ರಸ್ತಾಪಿಸಿರುವ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯ ಪ್ರಸ್ತಾಪವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿದೆ. ಗ್ರೀನ್‌ಪೀಸ್ ಇಂಡಿಯಾವು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮತ್ತು ಕರ್ನಾಟಕ ಸಾರಿಗೆ ಇಲಾಖೆಗೆ ರಾಜ್ಯದಲ್ಲಿ ಸಾರಿಗೆದರ ಏರಿಕೆಯ ಕುರಿತಂತೆ ಪತ್ರ ಬರೆದಿದ್ದು, ನಮ್ಮ ಮೆಟ್ರೋ ಮತ್ತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಬಸ್ಸುಗಳಲ್ಲಿ ಪ್ರಸ್ತಾವಿತ ಪ್ರಯಾಣ ದರ ಹೆಚ್ಚಳವನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.
ಮೆಟ್ರೋ ರೈಲು ನಿಗಮವು ಪ್ರಸ್ತುತ ಪ್ರಯಾಣದರದಲ್ಲಿ ಶೇಕಡಾ 40 ರಿಂದ 45 ರಷ್ಟು ಹೆಚ್ಚಳವನ್ನು ಪ್ರಸ್ತಾಪಿಸಿದೆ. ಈ ಪ್ರಸ್ತಾಪವು ಜಾರಿಯಾದರೆ ಕನಿಷ್ಠ ದರವನ್ನು ₹15 ಕ್ಕೆ ಮತ್ತು ಗರಿಷ್ಠ ದರವನ್ನು ₹85 ಕ್ಕೆ ಹೆಚ್ಚಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಗ್ರೀನ್‌ಪೀಸ್ ಇಂಡಿಯಾವು ಜನವರಿ 5, 2025 ರಿಂದ ರಾಜ್ಯದಲ್ಲಿ ಜಾರಿಯಾಗಿರುವ 15 ಶೇಕಡಾ ಬಸ್ಸು ದರ ಏರಿಕೆಯನ್ನೂ ಹಿಂಪಡೆಯಲು ಆಗ್ರಹಿಸಿದೆ.