ವಿಶ್ವದ 3ನೇ ಅತಿದೊಡ್ಡ ಮೆಟ್ರೋ ನೆಟ್ವರ್ಕ್ ಹೊಂದಿದ ದೇಶ ನಮ್ಮ ಭಾರತ
ವಿಶ್ವದ 3ನೇ ಅತಿದೊಡ್ಡ ಮೆಟ್ರೋ ನೆಟ್ವರ್ಕ್ ಹೊಂದಿದ ದೇಶ ನಮ್ಮ ಭಾರತ
ಜಗತ್ತಿನ ಮೂರನೇ ಅತಿದೊಡ್ಡ ಮೆಟ್ರೋ ರೈಲ್ವೆ ನೆಟ್ವರ್ಕ್ ವ್ಯವಸ್ಥೆ ಹೊಂದಿದ ದೇಶ ನಮ್ಮ ಭಾರತ ದೇಶವಾಗಿದೆ. 1,000 kmನಷ್ಟು ಮೆಟ್ರೋ ರೈಲು ನೆಟ್ವರ್ಕ್ ನ ಮೈಲಿಗಲ್ಲನ್ನು ಇತ್ತೀಚೆಗೆ ತಲುಪಲಾಗಿದೆ. ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿ ಮೆಟ್ರೋದಲ್ಲಿ 2.8km ಉದ್ದದ ಜನಕಪುರಿ ಮತ್ತು ಕೃಷ್ಣ ಪಾರ್ಕ್ ಮಾರ್ಗ ಉದ್ಘಾಟನೆ ಮಾಡಿದರು.
ಸಾಹಿಬಾಬಾದ್ ಮತ್ತು ನ್ಯೂ ಅಶೋಕ್ ನಗರ ನಡುವಿನ ದೆಹಲಿ ಘಾಜಿಯಾಬಾದ್ ಮೀರತ್ ನಮೋ ಭಾರತ್ ಕಾರಿಡಾರ್ 13km ಉದ್ದದ ಮಾರ್ಗವನ್ನೂ ಪಿಎಂ ಮೋದಿ ಚಾಲನೆಗೊಳಿಸಿದರು.
ಈ ಮೂಲಕ ಭಾರತದಲ್ಲಿ ಮೆಟ್ರೋ ನೆಟ್ವರ್ಕ್ 1,000km ಉದ್ದದ ಮೈಲಿಗಲ್ಲನ್ನು ದಾಟಿದೆ. ಈ ಸಾಧನೆ ಮಾಡಿದ ಮೂರನೇ ದೇಶ ನಮ್ಮ ಭಾರತ ದೇಶವಾಗಿದೆ.