ಬಾಹ್ಯಕಾಶ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ಮಾಡಿದ ‘ಇಸ್ರೋ’
ಬಾಹ್ಯಕಾಶಕ್ಷೇತ್ರದಲ್ಲಿ ಮತ್ತೊಂದು ಸಾಧನೆ ಮಾಡಿದ ‘ಇಸ್ರೋ’
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಸತತ ನಾಲ್ಕನೇ ಪ್ರಯತ್ನದಲ್ಲಿ ತನ್ನ SpaDex ಉಪಗ್ರಹದ ಡಾಕಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಆ ಮೂಲಕ ಡಾಕಿಂಗ್ ಮತ್ತು ಅನ್ ಡಾಕಿಂಗ್ ಸಾಮರ್ಥ್ಯ ಹೊಂದಿದ ವಿಶ್ವದ ನಾಲ್ಕನೇ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಹ್ಯಾಕಾಶದಲ್ಲಿ ಅವಳಿ ಉಪಗ್ರಹಗಳನ್ನು ಇಸ್ರೋ ಜೋಡಿಸಿದೆ. ಚೇಸರ್ ಸ್ಯಾಟಲೈಟ್, ಟಾರ್ಗೆಟ್ ಸ್ಯಾಟಲೈಟ್ ಉಪಗ್ರಹಗಳನ್ನು ಜೋಡಿಸಲಾಗಿದೆ. ಎರಡು ಉಪಗ್ರಹಗಳು ತಲಾ 220ಕೆಜಿ ಭಾರ ಹೊಂದಿದೆ. PSLV-C60 ರಾಕೆಟ್ ನಿಂದ ಡಿಸೆಂಬರ್ 30ರಂದು ಇದನ್ನು ಲಾಂಚ್ ಮಾಡಲಾಗಿತ್ತು.