• 15 ಫೆಬ್ರವರಿ 2025

ಗ್ರಾಮೀಣ ಬಾಲ ಪ್ರತಿಭೆ ಕುಮಾರಿ ತನ್ವಿ ಅಂಚನ್

 ಗ್ರಾಮೀಣ ಬಾಲ ಪ್ರತಿಭೆ ಕುಮಾರಿ ತನ್ವಿ ಅಂಚನ್
Digiqole Ad

ಗ್ರಾಮೀಣ ಬಾಲ ಪ್ರತಿಭೆ ಕುಮಾರಿ ತನ್ವಿ ಅಂಚನ್ 

ಆತ್ಮವಿಶ್ವಾಸ ಮತ್ತು ಮಾನಸಿಕ ಸಾಮರ್ಥ್ಯ, ಜೊತೆಗೆ ಉತ್ತಮ ತರಬೇತಿ ಸಿಕ್ಕರೆ ಬಾಲಕಿಯರು ಸಾಹಸ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವರು ಎಂಬುದನ್ನು ಸಾಬೀತುಪಡಿಸಿ ,ಪ್ರೇಕ್ಷಕರ ಮನಸೆಳೆದ ಗ್ರಾಮೀಣ ಬಾಲ ಪ್ರತಿಭೆ ಕುಮಾರಿ ತನ್ವಿ ಅಂಚನ್. 

ಕುಮಾರಿ ತನ್ವಿ ಅಂಚನ್ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದು ಶ್ರೀಮತಿ ಗೀತಾ ಮತ್ತು ದಯಾನಂದ ಸಾಲಿಯನ್ ಕೊಳ್ತಿಗೆ ಇವರ ಹೆಮ್ಮೆಯ ಸಾಹಸಿ ಪುತ್ರಿ. ಉತ್ತಮ ಯೋಗಪಟುವಾದ ಇವಳು ಶಾಲಾ ಯೋಗ ಶಿಕ್ಷಕರಾದ ಶ್ರೀ ನವೀನ್ ಕುಮಾರ್ ಬಿ ಇವರು ತರಬೇತು ನೀಡಿರುತ್ತಾರೆ.ಇವರು 4/1 / 2025 ರಂದು ನಡೆದ ಸಾಂದೀಪನಿ ವಿದ್ಯಾಸಂಸ್ಥೆಗಳ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಅತ್ಯುತ್ತಮ ಕೂಪಿಕಾ ಸಮತೋಲನ ಪ್ರದರ್ಶನ ನೀಡಿ ಜನ ಮನ ಸೆಳೆದರು.ಬಾಲಕಿಯರು ಸಾಹಸ ಪ್ರದರ್ಶಿಸುತ್ತಿರುವುದು ಹೆಮ್ಮೆ ವಿಷಯ.ಎಳೆ ಪ್ರತಿಭೆ ತನ್ವಿ ಅಂಚನ್ ಇನ್ನೂ ಉತ್ತಮ ವಿಶೇಷ ಸಾಹಸ ಪ್ರದರ್ಶನಗಳನ್ನು ನೀಡಲಿ ಇವಳ ಭವಿಷ್ಯ ಉಜ್ವಲವಾಗಲಿ ಎಂದು ನಾವೆಲ್ಲರೂ ಹಾರೈಸೋಣ.

Digiqole Ad

ಈ ಸುದ್ದಿಗಳನ್ನೂ ಓದಿ