16,17 ರಂದು ಸಿಇಟಿ ಪರೀಕ್ಷೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ಘೋಷಣೆ
16,17 ರಂದು ಸಿಇಟಿ ಪರೀಕ್ಷೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ಘೋಷಣೆ
ಬೆಂಗಳೂರು: ಸಿಇಟಿ ಪರೀಕ್ಷೆ ಏಪ್ರಿಲ್ 16 ಮತ್ತು 17ಕ್ಕೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಕೃತ ಘೋಷಣೆ ಮಾಡಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರು ದಿನಾಂಕ ಘೋಷಣೆ ಮಾಡಿದ್ದಾರೆ.
ಸಿಇಟಿ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜ.23 ರಿಂದ ಫೆ.21ರ ವರೆಗೆ ಅವಕಾಶವಿದೆ ಎಂದು ಕೆಇಎ ತಿಳಿಸಿದೆ.
ಸಿಇಟಿ ವೇಳಾಪಟ್ಟಿ:
ಏ.16 :
ಬೆಳಗ್ಗೆ 10:30 – ಭೌತಶಾಸ್ತ್ರ
ಮಧ್ಯಾಹ್ನ 2:30 – ರಸಾಯನಶಾಸ್ತ್ರ
ಏ.17 :
ಬೆಳಗ್ಗೆ 10:30 – ಗಣಿತ
ಮಧ್ಯಾಹ್ನ 2:30 – ಜೀವಶಾಸ್ತ್ರ