ಗೆಳೆಯರ ಬಳಗ ಕೊಡಿಮಾರು ಅಬೀರ ವತಿಯಿಂದ “ಕೊಡಿಮಾರು ಪ್ರೀಮಿಯರ್ ಲೀಗ್ -2025” ಕ್ರಿಕೆಟ್ ಪಂದ್ಯಾಟ
ಗೆಳೆಯರ ಬಳಗ ಕೊಡಿಮಾರು ಅಬೀರ ವತಿಯಿಂದ “ಕೊಡಿಮಾರು ಪ್ರೀಮಿಯರ್ ಲೀಗ್ -2025” ಕ್ರಿಕೆಟ್ ಪಂದ್ಯಾಟ
ಕ್ರೀಡೆ ದೈಹಿಕ ಮಾನಸಿಕ ಆರೋಗ್ಯದ ಬೆಳವಣಿಗೆಗೆ ಸಹಕಾರಿ, ಕ್ರೀಡಾ ಕೂಟಗಳ ಆಯೋಜನೆಯ ಮೂಲಕ ಸಂಘಟನಾ ಶಕ್ತಿಯನ್ನು ರೂಪಿಸಿಕೊಂಡು ಸಮಾಜದಲ್ಲಿ ಉತ್ತಮ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರು ವಕೀಲರಾದ ಮಹೇಶ್ ಕೆ ಅವರು ಗೆಳೆಯರ ಬಳಗ (ರಿ) ಕೊಡಿಮಾರು ಅಬೀರ ಇದರ ವತಿಯಿಂದ ಸುಭಾಶ್ ಚಂದ್ರ ಬೋಸ್ ಕ್ರೀಡಾಂಗಣ ಏಲಡ್ಕದಲ್ಲಿ ನಡೆದ ಕೊಡಿಮಾರು ಪ್ರೀಮಿಯರ್ ಲೀಗ್ 2025 ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷರಾದ ಬಾಲಚಂದ್ರ ಅಬೀರ ವಹಿಸಿದ್ದರು. ವೇದಿಕೆಯಲ್ಲಿ ಕೊಡಿಮಾರು ದೈವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉದಯ ರೈ ಮಾದೋಡಿ, ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಕಾಣಿಯೂರು ಇದರ ಅಧ್ಯಕ್ಷರಾದ ಕಿರಣ್ ಮಲೆಕೆರ್ಚಿ,ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಜುನಾಥ ನಗರ ಮುಖ್ಯ ಗುರುಗಳಾದ ಸಂತೋಷ್,ಗೆಳಯರ ಬಳಗದ ಕಾರ್ಯದರ್ಶಿ ಶ್ರೀನಿತ್ ಮಿಪಾಲು ಉಪಸ್ಥಿತರಿದ್ದರು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ಕೂಟದ ಉದ್ಘಾಟನೆಯನ್ನು ಗೆಳಯರ ಬಳಗದ ಸ್ಥಾಪಕಾಧ್ಯಕ್ಷರಾದ ಶ್ರೀ ವಸಂತ ರೈ ಕಾರ್ಕಳ ಅವರು ನೆರವೇರಿಸಿದರು. ಉದ್ಘಾಟನ ಸಮಾರಂಭದ ವೇದಿಕೆಯಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಬಾಲಚಂದ್ರ ಅಬೀರ,ಸ್ಥಾಪಕ ಕಾರ್ಯದರ್ಶಿ ಶೇಖರ ಅಬೀರ ಗೌರವಾಧ್ಯಕ್ಷರಾದ ಅಶ್ಲೇಷ್ ಮಿಪಾಲು, ಕಾರ್ಯದರ್ಶಿ ಶ್ರೀನಿತ್ ಮಿಪಾಲು ಉಪಸ್ಥಿತರಿದ್ದರು. ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದು ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆದು ಮನೋಜ್ ಬರೆಮೇಲು ಮತ್ತು ಜಿತೇಶ್ ಅಗಳಿ ಮಾಲಕತ್ವದ ಸದಾಶಿವ ವಾರಿಯರ್ಸ್ ತಂಡ ಪ್ರಥಮ ಸ್ಥಾನ, ಶರೀಫ್ ಕೂಡು ರಸ್ತೆ ಮಾಲಕತ್ವದ ನಕ್ಷತ್ರ ಪ್ರೆಂಡ್ಸ್ ತಂಡ ದ್ವಿತೀಯ ಸ್ಥಾನ, ಸಂಪತ್ ಬೈತ್ತಡ್ಕ ಮತ್ತು ಜಗ್ಗೇಶ್ ಕೆನ್ನಾರು ಕೆ.ಬಿ ಸ್ಟ್ರೆಕರ್ಸ್ ತಂಡ ತೃತೀಯ ಸ್ಥಾನ ಪಡೆದು ಕೊಂಡಿತ್ತು.