ಹೊಸ ಬೈಕ್, ಕಾರು ಖರೀದಿಸುವವರಿಗೆ ಶಾಕ್ ನೀಡಿದ ರಾಜ್ಯ ಸರಕಾರ: ರಿಜಿಸ್ಟ್ರೇಷನ್ ದರ ಏರಿಕೆ
ಹೊಸ ಬೈಕ್, ಕಾರು ಖರೀದಿಸುವವರಿಗೆ ಶಾಕ್ ನೀಡಿದ ರಾಜ್ಯ ಸರಕಾರ: ರಿಜಿಸ್ಟ್ರೇಷನ್ ದರ ಏರಿಕೆ
ಬೆಂಗಳೂರು: ಹೊಸ ಬೈಕ್, ಕಾರು ಖರೀದಿಸುವವರಿಗೆ ರಾಜ್ಯ ಸರಕಾರ ಶಾಕ್ ನೀಡಲು ಮುಂದಾಗಿದ್ದು, ಫೆಬ್ರವರಿಯಿಂದ ಹೊಸ ಬೈಕ್, ಕಾರು ಖರೀದಿಯ ನೋಂದಣಿ ಶುಲ್ಕ ತಲಾ 1,000 ರೂ. ಮತ್ತು 500 ರೂ. ಹೆಚ್ಚಳ ಮಾಡಲು ನಿರ್ಧರಿಸಿದೆ.
ಈಗಾಗಲೇ ಬೆಳಗಾವಿಯ ಅಧಿವೇಶನದಲ್ಲಿ ರಿಜಿಸ್ಟ್ರೇಷನ್ ಶುಲ್ಕ ಹೆಚ್ಚಳದ ಮಸೂದೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಫೆಬ್ರವರಿಯಿಂದ ಪರಿಷ್ಕೃತ ದರಿ ಜಾರಿಯಾಗಲಿದೆ. ದರ ಹೆಚ್ಚಳದಿಂದ ಬಂದ ಹಣವನ್ನು ಯೆಲ್ಲೋ ಬೋರ್ಡ್ ಚಾಲಕರ ಅಭಿವೃದ್ಧಿಗೆ ಬಳಕೆ ಮಾಡುವುದಾಗಿ ರಾಜ್ಯ ಸರಕಾರ ಹೇಳಿದೆ.