ಪುತ್ತೂರು: ರೈಲಿನಡಿಗೆ ಬಿದ್ದು ಅಪರಿಚಿತ ವ್ಯಕ್ತಿ ಮೃತ್ಯು
ಪುತ್ತೂರು: ರೈಲಿನಡಿಗೆ ಬಿದ್ದು ಅಪರಿಚಿತ ವ್ಯಕ್ತಿ ಮೃತ್ಯು
ಪುತ್ತೂರು: ರೈಲಿನಡಿಗೆ ಬಿದ್ದು ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಸ್ಥಿತಿಯಲ್ಲಿ ಮೃತ ದೇಹವೊಂದು ಪತ್ತೆಯಾಗಿರುವ ವಿಚಾರ ಇಂದು ಬೆಳಗ್ಗೆ ಪುತ್ತೂರಿನ ಮುರ ಎಂಬಲ್ಲಿ ಬೆಳಕಿಗೆ ಬಂದಿದೆ.
ಮೃತಪಟ್ಟ ವ್ಯಕ್ತಿಯನ್ನು ಕನ್ಯಾನ ಮೂಲದವರು ಎಂದು ಹೇಳಲಾಗಿದೆ. ಆದರೆ ಈ ಕುರಿತು ಖಚಿತ ಮಾಹಿತಿ ದೊರಕಿಲ್ಲ. ಮೃತ ದೇಹದ ಕೈ,ಕಾಲುಗಲು ರೈಲು ಸಂಚರಿಸಿದ ಕಾರಣ ತುಂಡು ತುಂಡಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.