ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ ನಿಂದ ಮತ್ತೊಂದು ಟಫ್ ರೂಲ್ಸ್
ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ ನಿಂದ ಮತ್ತೊಂದು ಟಫ್ ರೂಲ್ಸ್
ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಸರಣಿಗಳಲ್ಲಿ ಭಾರತ ತಂಡವು ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನೆಲೆ ಬಿಸಿಸಿಐ ಆಟಗಾರರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಇತ್ತೀಚೆಗಷ್ಟೇ ವಿದೇಶ ಪ್ರವಾಸಿಗಳಿಗೆ ಪತ್ನಿ ಹಾಗೂ ಕುಟುಂಬಸ್ಥರನ್ನು ಕರೆದೊಯ್ಯುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವನ್ನು ಬಿಸಿಸಿಐ ಜಾರಿಗೊಳಿಸಿತು.
ಇದೀಗ ಆಟಗಾರರು ವಿದೇಶಿ ಪ್ರವಾಸಕ್ಕೆ ತಮ್ಮ ವೈಯಕ್ತಿಕ ಕೇಶ ವಿನ್ಯಾಸಕರು, ಸ್ಟೈಲಿಸ್ಟ್, ಅಡುಗೆಯವರು ಮತ್ತು ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯುವಂತಿಲ್ಲ ಎಂಬ ಹೊಸ ನಿಯಮವನ್ನು ಜಾರಿಗೊಳಿಸಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.