ದೆಹಲಿ: ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಮಹಿಳೆಯರಿಗೆ ತಿಂಗಳಿಗೆ 2500, 500 ರೂ.ಗೆ ಎಲ್‌ಪಿಜಿ ಭರವಸೆ
ದೆಹಲಿ: ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಮಹಿಳೆಯರಿಗೆ ತಿಂಗಳಿಗೆ 2500, 500 ರೂ.ಗೆ ಎಲ್‌ಪಿಜಿ ಭರವಸೆ
ನವದೆಹಲಿ: ಫೆಬ್ರವರಿ 5 ರಂದು ನಡೆಯುವ ದೆಹಲಿ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ತನ್ನ ಪ್ರಣಾಳಿಕೆ ‘ಸಂಕಲ್ಪ ಪತ್ರ’ವನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಮಹಿಳೆಯರಿಗೆ ತಿಂಗಳಿಗೆ 2500 ರೂ. ಹಾಗೂ 500 ರೂ.ಗೆ ಎಲ್‌ಪಿಜಿ ಸಿಲಿಂಡರ್ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.
ಇಂದು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಪ್ರಣಾಳಿಕೆಯು ಪ್ರಗತಿಗೆ ನೀಲನಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಒತ್ತಿ ಹೇಳಿದರು.
ಬಿಜೆಪಿ ಪ್ರಣಾಳಿಕೆಯಲ್ಲಿನ ಪ್ರಮುಖ ಭರವಸೆಗಳು
ಮಹಿಳಾ ಸಮೃದ್ಧಿ ಯೋಜನೆಯಡಿ ದೆಹಲಿಯ ಮಹಿಳೆಯರಿಗೆ 2,500 ರೂ.
ದೆಹಲಿಯ ಬಡ ಮಹಿಳೆಯರಿಗೆ 500 ರೂ.ಗೆ ಎಲ್ ಪಿಜಿ ಸಿಲಿಂಡರ್
ಮಹಿಳೆಯರಿಗೆ 6 ಪೌಷ್ಠಿಕಾಂಶ ಕಿಟ್‌ಗಳು, ಗರ್ಭಿಣಿ ತಾಯಂದಿರಿಗೆ 21,000 ರೂ. ನೀಡಲಾಗುವುದು.
ಮೊದಲ ಸಂಪುಟದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಅನುಷ್ಠಾನ, ಹೆಚ್ಚುವರಿ ಆರೋಗ್ಯ ರಕ್ಷಣೆಗೆ 50,000 ರೂ.
60-70 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ 2,000-2,500 ರೂ. ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ 3,000 ರೂ.ಗಳನ್ನು ಪಡೆಯುವ ಪಿಂಚಣಿ ಯೋಜನೆ.