ಅರೆಭಾಷಾ ಕಲಾವಿದರ ಒಕ್ಕೂಟ ರಚನೆಗೆ ಪ್ರಸ್ತಾವನೆ
ಅರೆಭಾಷಾ ಕಲಾವಿದರ ಒಕ್ಕೂಟ ರಚನೆಗೆ ಪ್ರಸ್ತಾವನೆ
ಅರೆಭಾಷಾ ಸಂಸ್ಕೃತಿ ಮತ್ತು ಕಲೆಗಳ ಪ್ರಚಾರ-ಪ್ರಸಾರ ಮತ್ತು ಸಂರಕ್ಷಣೆಗೆ ಮಹತ್ವದ ಹೆಜ್ಜೆ ಇಡುತ್ತಿರುವ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಅರೆಭಾಷಾ ಕಲಾವಿದರನ್ನು ಸಂಘಟಿಸುವ ನಿಟ್ಟಿನಲ್ಲಿ ಅರೆಭಾಷಾ ಕಲಾವಿದರ ಒಕ್ಕೂಟವನ್ನು ರಚಿಸಲು ಮುಂದಾಗಿದೆ.
ಸುಳ್ಯ, ಕೊಡಗು ಮತ್ತು ಕೇರಳದ ಗಡಿಭಾಗಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುವ ಅರೆಭಾಷೆ, ತನ್ನ ವೈವಿಧ್ಯಮಯ ಸಂಸ್ಕೃತಿಯುಳ್ಳ ಕಲೆಗಳಿಗೆ ಹೆಸರಾಗಿದೆ. ಈ ಭಾಷೆಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಮತ್ತು ಕಲಾ ಪ್ರಕಾರಗಳ ಮೂಲಕ ತನ್ನ ಶ್ರೇಷ್ಠತೆಯನ್ನು ಪ್ರದರ್ಶಿಸಲು ಈ ಒಕ್ಕೂಟವು ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.
ಅರೆಭಾಷೆಯನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲದೆ, ಈ ಭಾಷೆಯ ಬಗ್ಗೆ ಅಭಿಮಾನ ಹೊಂದಿರುವ ಎಲ್ಲ ಕಲಾವಿದರು ಈ ಒಕ್ಕೂಟದಲ್ಲಿ ಸೇರಿಕೊಳ್ಳಲು ಸ್ವಾಗತಾರ್ಹರಾಗಿದ್ದಾರೆ. ಅರೆಭಾಷೆಯನ್ನು ತಮ್ಮ ಕಲೆಗಳಲ್ಲಿ ಪ್ರದರ್ಶಿಸುತ್ತಿರುವ ಗಾಯಕರು, ಸೋಬಾನೆ ಹಾಡುವವರು, ಮಿಮಿಕ್ರಿ ತಜ್ಞರು, ನೃತ್ಯಪಟುಗಳು, ಭಜನೆ ಗುಂಪುಗಳ ಕಲಾವಿದರು, ಯಕ್ಷಗಾನ ಕಲಾವಿದರು ಹಾಗೂ ಇತರ ಎಲ್ಲಾ ಪ್ರಕಾರದ ಕಲಾವಿದರು ಈ ಒಕ್ಕೂಟದ ಪ್ರಮುಖ ಅಂಶವಾಗಲಿದ್ದಾರೆ.
ದಿನಾಂಕ: ಜನವರಿ 18, 2025ರಂದು ಮಧ್ಯಾಹ್ನ 3:00ಕ್ಕೆ ಮದುವೆಗದ್ದೆ ಭೋಜಪ್ಪ ಗೌಡ ಸಭಾಂಗಣ, ವೆಂಕಟರಮಣ ಸೊಸೈಟಿ, ಸುಳ್ಯದಲ್ಲಿ ಕಲೆ ಮತ್ತು ಭಾಷೆ ನಡುವಿನ ಬಾಂಧವ್ಯವನ್ನು ಗಟ್ಟಿಯಾಗಿಸಿ, ಅರೆಭಾಷೆಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಗುರಿಯಾಗಿರುಸುವ ಸಲುವಾಗಿ ಎಲ್ಲ ಕಲಾವಿದರಿಗೂ ಈ ಮಹತ್ವದ ಘಟನೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾರೆ.