ಪಾದಚಾರಿ, ದ್ವಿಚಕ್ರ ವಾಹನ ಸವಾರರ ಮತ್ತು ಮಕ್ಕಳ ಸುರಕ್ಷತೆಯ ಹಿತಚಿಂತನೆ: ಧೂಳು ನಿವಾರಣೆಗೆ ಜನಪ್ರತಿನಿಧಿಗಳ ತ್ವರಿತ ಕಾರ್ಯ” ಗ್ರಾಮ ಪಂಚಾಯತ್ ಉಪಾಧ್ಯಕ್ಷರ ಶೀಘ್ರ ಸ್ಪಂದನೆ
ಪಾದಚಾರಿ, ದ್ವಿಚಕ್ರ ವಾಹನ ಸವಾರರ ಮತ್ತು ಮಕ್ಕಳ ಸುರಕ್ಷತೆಯ ಹಿತಚಿಂತನೆ: ಧೂಳು ನಿವಾರಣೆಗೆ ಜನಪ್ರತಿನಿಧಿಗಳ ತ್ವರಿತ ಕಾರ್ಯ” ಗ್ರಾಮ ಪಂಚಾಯತ್ ಉಪಾಧ್ಯಕ್ಷರ ಶೀಘ್ರ ಸ್ಪಂದನೆ
ಕೆಲವೊಮ್ಮೆ ಕೆಲವು ಕೆಲಸ ಕಾರ್ಯಗಳು ಅತಿ ಸಣ್ಣದು ಎನಿಸಿದರೂ ಅದರ ಪ್ರಯೋಜನ ಮಾತ್ರ ಬಹು ದೊಡ್ಡದಾಗಿರುತ್ತದೆ.ಇದಕ್ಕೆ ಪೂರಕ ಎಂಬಂತಿದೆ ಜನಪ್ರತಿನಿಧಿ ಒರ್ವರು ಕೂಡಲೇ ಸಮಸ್ಯೆಗೆ ಸ್ಪಂದಿಸಿ ಮಾಡಿದ ಈ ಕೆಲಸ .ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಣಿಯೂರು,ಮಾದೋಡಿ, ಪೆರುವಾಜೆ ಸಂಪರ್ಕ ರಸ್ತೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಪೈಪ್ ಅಳವಡಿಸಲು ಮಾರ್ಗದ ಬದಿಯಲ್ಲಿ ಅಗೆದ ಕಾರಣ ರಸ್ತೆಯಿಡಿ ಧೂಳು ತುಂಬಿ ಶಾಲಾ ಮಕ್ಕಳು, ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.ಧೂಳಿನಿಂದ ರಸ್ತೆಯ ಪಕ್ಕದಲ್ಲೆ ಇರುವ ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದನ್ನು ಮನಗಂಡು ಈ ಎಲ್ಲ ಸಮಸ್ಯೆಗೆ ಕೂಡಲೇ ಸ್ಪಂದಿಸಿ ಸಂಬಂಧ ಪಟ್ಟವರನ್ನು ಸಂಪರ್ಕಿಸಿ ತಾನೇ ನಿಂತು ಟ್ಯಾಂಕರ್ ಮೂಲಕ ನೀರು ಹಾಕಿ ರಸ್ತೆಯಲ್ಲಿ ಇರುವ ಧೂಳು ಮಣ್ಣನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡವರು ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ ಮತ್ತು ಇವರ ಜೊತೆ ಸಹಕರಿಸಿದರು ದಿನೇಶ್ ಕೆಳಗಿನ ಮನೆ