‘ಸ್ವಾಮಿತ್ವ’ ಯೋಜನೆಯಡಿ 65 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಆಸ್ತಿ ಕಾರ್ಡ್ ವಿತರಿಸಿದ ಪಿಎಂ
‘ಸ್ವಾಮಿತ್ವ’ ಯೋಜನೆಯಡಿ 65 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಆಸ್ತಿ ಕಾರ್ಡ್ ವಿತರಿಸಿದ ಪಿಎಂ
ನವದೆಹಲಿ: ಪಿಎಂ ನರೇಂದ್ರ ಮೋದಿ ಅವರು 65 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ‘ಸ್ವಾಮಿತ್ವ’ ಯೋಜನೆಯಡಿಯಲ್ಲಿ ಆಸ್ತಿ ಕಾರ್ಡ್ ಗಳನ್ನು ವಿತರಿಸಿದ್ದಾರೆ.
ಈ ಕಾರ್ಯಕ್ರಮವನ್ನು ಅವರು ವರ್ಚುವಲ್ ಆಗಿ ಉದ್ದೇಶಿಸಿ ಮಾತನಾಡಿ, ಗ್ರಾಮಗಳ ಅಭಿವೃದ್ಧಿಯಲ್ಲಿ ಆಸ್ತಿ ಹಕ್ಕುಗಳ ಮಹತ್ವವನ್ನು ಒತ್ತಿ ಹೇಳಿದರು. ಮಾಲೀಕತ್ವ ವ್ಯವಸ್ಥೆಗಳು ಗ್ರಾಮಗಳ ಅಭಿವೃದ್ಧಿಗೆ ಕಾರಣವಾಗಲಿವೆ. ಭೂ ಆಧಾರ್ ಮೂಲಕ ಭೂಮಿಗೆ ವಿಶಿಷ್ಟ ಗುರುತನ್ನು ನೀಡಲಾಗಿದೆ, ಸುಮಾರು 23 ಕೋಟಿ ಭೂ ಆಧಾರ್ ಸಂಖ್ಯೆ ನೀಡಲಾಗಿದೆ ಕಳೆದ 7ರಿಂದ 8 ವರ್ಷಗಳಲ್ಲಿ ಶೇ.98 ರಷ್ಟು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದರು.
‘ಸ್ವಾಮಿತ್ವ’ ಯೋಜನೆಯು ಗ್ರಾಮೀಣ ಆಡಳಿತದಲ್ಲಿ ಮಾರ್ಪಡುವಿಕೆ ಹಾಗೂ ಆಸ್ತಿ ಮಾಲೀಕರಿಗೆ ಕಾನೂನು ಮಾನ್ಯತೆಯನ್ನು ಖಾತರಿ ಪಡಿಸುವಲ್ಲಿ ಪ್ರಮುಖವಾಗಿದೆ. ಆಸ್ತಿ ಮಾಲೀಕತ್ವವನ್ನು ನೀಡುವ ಮೂಲಕ ಗ್ರಾಮೀಣ ನಿವಾಸಿಗಳಿಗೆ ಸಾಲ, ಸರ್ಕಾರಿ ಸೌಲಭ್ಯ ಹಾಗೂ ಸೇವೆ ಇವುಗಳನ್ನು ಉತ್ತಮಗೊಳಿಸುವ ಮತ್ತು ಸಾಮಾಜಿಕ, ಆರ್ಥಿಕ ಸ್ಥಿರತೆಯನ್ನು ಉತ್ತೇಜಿಸುವಲ್ಲಿ ಈ ಯೋಜನೆಯು ಪ್ರಧಾನ ಪಾತ್ರವಹಿಸುತ್ತದೆ.