ಸೈಫ್ ಆಲಿಖಾನ್ ಮೇಲೆ ದಾಳಿ: ಮುಖ್ಯ ಆರೋಪಿ ಬಾಂಗ್ಲಾದೇಶ ಪ್ರಜೆ ಥಾಣೆಯಲ್ಲಿ ಬಂಧನ
ಸೈಫ್ ಆಲಿಖಾನ್ ಮೇಲೆ ದಾಳಿ: ಮುಖ್ಯ ಆರೋಪಿ ಬಾಂಗ್ಲಾದೇಶ ಪ್ರಜೆ ಥಾಣೆಯಲ್ಲಿ ಬಂಧನ
ಥಾಣೆ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿಯ ಪ್ರಮುಖ ಆರೋಪಿಯನ್ನು ಥಾಣೆಯಲ್ಲಿ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಆರೋಪಿ ಬಂಗಾಳದೇಶಿ ಪ್ರಜೆ ಕಳ್ಳತನದ ಉದ್ದೇಶದಿಂದ ನಟನ ಮನೆಗೆ ಪ್ರವೇಶಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಥಾಣೆ ಪಕ್ಕದ ಪ್ರದೇಶದಿಂದ ಬಂಧಿಸಲ್ಪಟ್ಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ಆರೋಪಿ ಬಾಂಗ್ಲಾದೇಶದವನಾಗಿದ್ದು, ಭಾರತಕ್ಕೆ ಪ್ರವೇಶಿಸಿದ ನಂತರ ತನ್ನ ಹೆಸರನ್ನು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ನಿಂದ ಬಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.