• 15 ಫೆಬ್ರವರಿ 2025

ಮಂಗಳೂರು-ಸುಬ್ರಹ್ಮಣ್ಯಕ್ಕೆ ಅನುಕೂಲಕರವಾದ ಸಮಯಕ್ಕೆ ಪ್ರಯಾಣಿಕರ ರೈಲು ವಿಸ್ತರಣೆ ಮತ್ತು ಕಾಣಿಯೂರು ಭಜನಾ ಮಂದಿರದ ಅಭಿವೃದ್ಧಿಗೆ ಅನುದಾನಕ್ಕೆ ಸಂಸದರಿಗೆ ಮನವಿ

 ಮಂಗಳೂರು-ಸುಬ್ರಹ್ಮಣ್ಯಕ್ಕೆ ಅನುಕೂಲಕರವಾದ ಸಮಯಕ್ಕೆ ಪ್ರಯಾಣಿಕರ ರೈಲು ವಿಸ್ತರಣೆ ಮತ್ತು ಕಾಣಿಯೂರು ಭಜನಾ ಮಂದಿರದ ಅಭಿವೃದ್ಧಿಗೆ ಅನುದಾನಕ್ಕೆ ಸಂಸದರಿಗೆ ಮನವಿ
Digiqole Ad

ಮಂಗಳೂರು-ಸುಬ್ರಹ್ಮಣ್ಯಕ್ಕೆ ಅನುಕೂಲಕರವಾದ ಸಮಯಕ್ಕೆ ಪ್ರಯಾಣಿಕರ ರೈಲು ವಿಸ್ತರಣೆ ಮತ್ತು ಕಾಣಿಯೂರು ಭಜನಾ ಮಂದಿರದ ಅಭಿವೃದ್ಧಿಗೆ ಅನುದಾನಕ್ಕೆ ಸಂಸದರಿಗೆ ಮನವಿ

ಕಾಣಿಯೂರು ಮತ್ತು ಆಸುಪಾಸಿನ ಭಾಗದ ಬಹುಜನರ ಹಲವಾರು ವರ್ಷಗಳ ಬೇಡಿಕೆಯಾದ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಬೆಳಗ್ಗೆ ಮತ್ತು ಸಂಜೆಯ ವೇಳೆ ಪ್ಯಾಸೆಂಜರ್ ರೈಲು ವಿಸ್ತರಣೆಯ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಕಾಣಿಯೂರಿನ ಜನತೆಯ ಪರವಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾ| ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಲಾಯಿತು.ಇಲ್ಲಿನ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯವಾಗಿ ಸ್ಪಂದಿಸುವಂತೆ ಸಂಸದರಿಗೆ ಮನವರಿಕೆ ಮಾಡಲಾಯಿತು. ಅಲ್ಲದೇ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಸಂಸದರಲ್ಲಿ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಉದಯ ರೈ ಮಾದೋಡಿ, ಜಯಸೂರ್ಯ ರೈ ಮಾದೋಡಿ, ಪದ್ಮಯ್ಯ ಗೌಡ ಅನಿಲ, ಪುಟ್ಟಣ್ಣ ಗೌಡ ಮುಗರಂಜ, ಸುರೇಶ್ ಓಡಬಾಯಿ ಮತ್ತಿತರರು ಉಪಸ್ಥಿತರಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ