ಮಹಾಕುಂಭ ಮೇಳ ಭಾರತದ ಆಧ್ಯಾತ್ಮಿಕ ಶಕ್ತಿಗೆ ಸಾಕ್ಷಿ – ಪ್ರಧಾನಿ ನರೇಂದ್ರ ಮೋದಿ
ಮಹಾಕುಂಭ ಮೇಳ ಭಾರತದ ಆಧ್ಯಾತ್ಮಿಕ ಶಕ್ತಿಗೆ ಸಾಕ್ಷಿ – ಪ್ರಧಾನಿ ನರೇಂದ್ರ ಮೋದಿ
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವನ್ನು, ” ಅದ್ಭುತ, ಅವಿಸ್ಮರಣೀಯ ” ಎಂದು ಬಣ್ಣಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿಶ್ವಕ್ಕೆ ಸಮಾನತೆ ಹಾಗೂ ಭಾತೃತ್ವದ ಸಂದೇಶ ಕಳುಹಿಸುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.118ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಮಹಾ ಕುಂಭ ಮೇಳದಲ್ಲಿ ಪಾಲ್ಗೊಳ್ಳುತ್ತಿರುವ ಭಕ್ತರ ಜನಸಂಖ್ಯೆ ನೋಡಿ ಇಡೀ ವಿಶ್ವವೇ ದಂಗಾಗಿದೆ. ಭಾರತದ ಧಾರ್ಮಿಕ ಪರಂಪರೆಯ ಅನಾವರಣಕ್ಕೆ ಮಹಾ ಕುಂಭಮೇಳ ಸಾಕ್ಷಿಯಾಗಿದೆ. ಇಲ್ಲಿನ ಅಪಾರ ಜನೋಸ್ತಮ ಭಾರತದ ಆಧ್ಯಾತ್ಮಿಕ ಪ್ರವೃತ್ತಿಗೆ ಹಿಡಿದ ಕನ್ನಡಿ ಎಂದರು.