• 10 ಫೆಬ್ರವರಿ 2025

ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅರೆಭಾಷೆಯ ಕಲಾವಿದರ ಒಕ್ಕೂಟ ರಚನೆಯ ಸಭೆ

Digiqole Ad

ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅರೆಭಾಷೆಯ ಕಲಾವಿದರ ಒಕ್ಕೂಟ ರಚನೆಯ ಸಭೆ

ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆಯ ಕಲಾವಿದರ ಒಕ್ಕೂಟ ರಚನೆ ಮಾಡುವ ಸಲುವಾಗಿ ಜ.18ರಂದು ಮದುವೆಗದ್ದೆ ಭೋಜಪ್ಪ ಗೌಡ ಸಭಾಂಗಣದಲ್ಲಿ ಸಭೆ ನಡೆಸಲಾಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಯುವ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಇನ್ನೋರ್ವ ಮಾಜಿ ಅಧ್ಯಕ್ಷರಾದ ದಿನೇಶ್ ಮಡಪ್ಪಾಡಿ, ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪಿ.ಸಿ.ಜಯರಾಮ, ತಾಲೂಕು ಯುವ ಗೌಡ ಸಂಘದ ಹಾಲಿ ಅಧ್ಯಕ್ಷರಾದ ಪಿ.ಎಸ್. ಗಂಗಾಧರ, ಅರೆಭಾಷೆ ಅಕಾಡೆಮಿಯ ಸದಸ್ಯೆ ಲತಾ ಕುಪ್ಪಾಜೆಯವರು ಉಪಸ್ಥಿತರಿದ್ದರು.

ಒಕ್ಕೂಟದ ನೂತನ ಅಧ್ಯಕ್ಷರಾಗಿ ಭವಾನಿಶಂಕರ ಅಡ್ತಲೆ, ಕಾರ್ಯದರ್ಶಿಯಾಗಿ ಜಯಪ್ರಕಾಶ್ ಪೆರುಮುಂಡ, ಕೋಶಾಧಿಕಾರಿಯಾಗಿ ಕು| ರಮ್ಯಶ್ರೀ ನಡುಮನೆ, ಉಪಾಧ್ಯಕ್ಷರಾಗಿ ಉದಯ ಭಾಸ್ಕರ, ಜೊತೆ ಕಾರ್ಯದರ್ಶಿಯಾಗಿ ಹವಿನ್ ಗುಂಡ್ಯ, ಸಂಚಾಲಕರಾಗಿ ಚಂದ್ರಮತಿ ಕೆ, ಯೋಗೇಶ್ ಹೊಸೊಳಿಕೆ, ಕೆ ಟಿ ಭಾಗೀಶ್, ಮಿಥುನ್ ಕುಮಾರ್ ಸೋನ, ನಿರ್ದೇಶಕರುಗಳಾಗಿ ಸಂಜೀವ ಕುಪ್ಪಾಜೆ ಲೋಕೇಶ್ ಊರುಬೈಲ್, ಭವನ್ ಕುಂಬಳಚೇರಿ, ಜೀವನ್‌ ಕೆರೆಮೂಲೆ, ವಿನೋದ್ ಮೂಡಗದ್ದೆ, ಉಷಾ ಕಾನತ್ತಿಲ, ಯಶವಂತ ಕುಡೆಕಲ್ಲು, ಸಂಧ್ಯಾ ಮಂಡೆಕೋಲು, ಸುಶ್ಮಿತಾ ಜಾಕೆ, ಹೇಮಲತಾ ಕಜೆ, ಸುಮತಿ ನಾಯಕ್ ಜಯನಗರ, ಜಯಶ್ರೀ ಪಲ್ಲತ್ತಡ್ಕ ಮತ್ತು ಸಲಹಾ ಮಂಡಳಿ ಸದಸ್ಯರಾಗಿ ದಿನೇಶ್ ಮಡಪ್ಪಾಡಿ, ಚಂದ್ರಶೇಖರ ಪೇರಾಲು, ಲತಾ ಪ್ರಸಾದ್‌ ಕುದ್ಘಾಜೆ, ಚಂದ್ರಾವತಿ ಬಡ್ಡಡ್ಕ ಆಯ್ಕೆಯಾಗಿರುತ್ತಾರೆ. ಸಭೆಯಲ್ಲಿ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಸದಸ್ಯರಾದ ಡಾ| ಎನ್ .ಎ. ಜ್ಞಾನೇಶ್, ಗೋಪಾಲ್ ಪೆರಾಜೆ, ಚಂದ್ರಶೇಖರ ಪೇರಾಲು ವಿ4 ಚಾನೆಲ್‌ನ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.ಸುಳ್ಯ ಕೊಡಗು ಮತ್ತು ಕೇರಳದ ಗಡಿ ಭಾಗದಲ್ಲಿ ಪ್ರಮುಖ ಭಾಷೆಯಾಗಿ ಹಿರಿಮೆಯನ್ನು ಹೊಂದಿರುವ ಅರೆಭಾಷೆ ಕಲಾವಿದರನ್ನು ಸಂಘಟಿಸುವ ಸಲುವಾಗಿ ಅರೆಭಾಷೆಯ ಕಲಾವಿದರ ಒಕ್ಕೂಟವನ್ನು ರಚಿಸುವ ಉದ್ದೇಶವಾಗಿರುತ್ತದೆ ಎಂಬ ಹಿನ್ನೆಲೆಯಲ್ಲಿ ಮತ್ತು ಅರೆಭಾಷೆಯನ್ನು ಮಾತೃಭಾಷೆಯನ್ನಾಗಿಸಿಕೊಂಡಿರುವ ಹಾಗೂ ಅರೆಭಾಷಿಕರಲ್ಲದಿದ್ದರೂ ಭಾಷೆಯ ಮೇಲೆ ಅಭಿಮಾನ ಹೊಂದಿರುವ ಕಲಾವಿದರನ್ನು ಸೇರಿಸಿಕೊಂಡು ಈ ಒಕ್ಕೂಟವನ್ನು ರಚಿಸಲಾಯಿತು.

Digiqole Ad

ಈ ಸುದ್ದಿಗಳನ್ನೂ ಓದಿ