ಪ್ರಯಾಗ್ ರಾಜ್ ಕುಂಭಮೇಳ – ಜನದಟ್ಟನೆ, ಕಾಲ್ತುಳಿತ ತಡೆಗೆ AI ತಂತ್ರಜ್ಞಾನ ಬಳಕೆ
ಪ್ರಯಾಗ್ ರಾಜ್ ಕುಂಭಮೇಳ – ಜನದಟ್ಟನೆ, ಕಾಲ್ತುಳಿತ ತಡೆಗೆ AI ತಂತ್ರಜ್ಞಾನ ಬಳಕೆ
ಪ್ರಯಾಗ ರಾಜ್ ಕುಂಭಮೇಳದಲ್ಲಿ ಕಾಲ್ತುಳಿತ ಮೊದಲಾದ ಘಟನೆಗಳನ್ನು ತಡೆಯಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಈ ಬಾರಿ AI ಅಳವಡಿಸಿಕೊಂಡಿರುವುದರಿಂದ ಜನಸಂದಣಿಯ ಗಾತ್ರದ ನಿಖರವಾದ ಅಂದಾಜುಗಳನ್ನು ಸಂಗ್ರಹಿಸಲು ಸಹಾಯಕವಾಗಲಿದೆ ಮತ್ತು ಸಂಭಾವ್ಯ ಸಮಸ್ಯೆಗೆ ಉತ್ತಮವಾಗಿ ಸಿದ್ಧರಾಗಲು ಅನುವು ಮಾಡಿಕೊಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಇದಕ್ಕಾಗಿ ಕೃತಕ ಬುದ್ಧಿಮತ್ತೆ ಆಧರಿತ 300 ಕ್ಯಾಮರಗಳನ್ನು ಸ್ಥಾಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.