ದೆಹಲಿಯಲ್ಲಿ ನಡೆಯಲಿರುವ ಗಣರಾಜೋತ್ಸವ ಪರೇಡ್ ಗೆ ಸುಳ್ಯದ ಎನ್ಎಂಸಿಯ ವಿದ್ಯಾರ್ಥಿ ಹರ್ಷಿತ್ ಕೆ.ಎಲ್ ವಿಶೇಷ ಅತಿಥಿಯಾಗಿ ಆಯ್ಕೆ
ದೆಹಲಿಯಲ್ಲಿ ನಡೆಯಲಿರುವ ಗಣರಾಜೋತ್ಸವ ಪರೇಡ್ ಗೆ ಸುಳ್ಯದ ಎನ್ಎಂಸಿಯ ವಿದ್ಯಾರ್ಥಿ ಹರ್ಷಿತ್ ಕೆ.ಎಲ್ ವಿಶೇಷ ಅತಿಥಿಯಾಗಿ ಆಯ್ಕೆ
ಸುಳ್ಯ: ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜೋತ್ಸವ ಪರೇಡ್ ಗೆ ಸುಳ್ಯದ ಪ್ರತಿಷ್ಟಿತ ನೆಹರೂ ಮೆಮೋರಿಯಲ್ ಕಾಲೇಜಿನ ದ್ವೀತಿಯ ಬಿಕಾಂ ವಿದ್ಯಾರ್ಥಿ, NSS ನಾಯಕ ಹರ್ಷಿತ್ ಕೆ.ಎಲ್ ವಿಶೇಷ ಅತಿಥಿಗಳಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಿಂದ 12 ಮಂದಿ ಸ್ವಯಂ ಸೇವಕರು ದೆಹಲಿಯ ಗಣರಾಜೋತ್ಸವ ಪರೇಡ್ ಗೆ ವಿಶೇಷ ಅತಿಥಿಗಳಾಗಿ ಆಯ್ಕೆಯಾಗಿದ್ದು,
ಮಂಗಳೂರು ವಿಶ್ವವಿದ್ಯಾಲಯದಿಂದ ಹರ್ಷಿತ್ ಕೆ.ಎಲ್ ಮತ್ತು ಅವರ ಪೋಷಕರಿಗೂ ಅವಕಾಶ ಲಭಿಸಿದೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.