ಪುಷ್ಪ-2 ನಿರ್ಮಾಪಕರ ಕಚೇರಿ, ಮನೆಗೆ ಐಟಿ ದಾಳಿ
ಪುಷ್ಪ-2 ನಿರ್ಮಾಪಕರ ಕಚೇರಿ, ಮನೆಗೆ ಐಟಿ ದಾಳಿ
ಹೈದರಾಬಾದ್: ತೆರಿಗೆ ವಂಚನೆ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆಯೂ ಟಾಲಿವುಡ್ ನಿರ್ಮಾಪಕ ದಿಲ್ ರಾಜುಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಎಂಟಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಲಾಗಿದ್ದು, ಅಧಿಕಾರಿಗಳು ದಾಖಲೆಯನ್ನು ಪರಿಶೀಲಿಸುತ್ತಿದ್ದಾರೆ.ಅಧಿಕೃತ ಮೂಲಗಳ ಪ್ರಕಾರ, ತೆಲಂಗಾಣ ಫಿಲ್ಡ್ ಫೆಡರೇಶನ್ ಡೆವಲಪ್‌ಮೆಂಟ್ ಕಾರ್ಪೊರೇಶನ್‌ನ ಅಧ್ಯಕ್ಷರೂ ಆಗಿರುವ ದಿಲ್ ರಾಜು ಮಾತ್ರವಲ್ಲದೆ, ಇತರ ಚಲನಚಿತ್ರ ನಿರ್ಮಾಪಕರು ಮತ್ತು ಅವರ ಸಹಚರರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ಇತ್ತೀಚೆಗಷ್ಟೇ ದೊಡ್ಡ ಬಜೆಟ್ ಸಿನಿಮಾ ಗೇಮ್ ಚೇಂಜರ್ ನಿರ್ಮಿಸಿದ್ದರು. ಇದು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಅದೇ ಹೊತ್ತಿಗೆ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ ಸಂಕ್ರಾಂತಿಕಿ ವಸ್ತುನ್ನಾಂ ಸಿನಿಮಾ ಕೂಡ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ನಡುವೆ ಐಟಿ ಅಧಿಕಾರಿಗಳು ನಿರ್ಮಾಪಕರಿಗೆ ಶಾಕ್ ಕೊಟ್ಟಿದ್ದಾರೆ.ದಿಲ್ ರಾಜು ಮಾತ್ರವಲ್ಲದೇ ಪುಷ್ಪ 2 ಚಿತ್ರದ ಟಾಲಿವುಡ್ ನಿರ್ಮಾಪಕರಾದ ನವೀನ್ ಯೆರ್ನೇನಿ, ರವಿಶಂಕರ್ ಮತ್ತು ಮೈತ್ರಿ ಮೂವಿ ಮೇಕರ್ಸ್ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ. ತೆರಿಗೆ ವಂಚಿಸಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.