ಅಮೆರಿಕಾದಲ್ಲಿ ವಾಸಿಸುತ್ತಿರುವ ಸುಮಾರು 18,000 ಜನರನ್ನು ವಾಪಸ್ ಕರೆಸಿಕೊಳ್ಳಲು ಭಾರತ ಸಜ್ಜು!
ಅಮೆರಿಕಾದಲ್ಲಿ ವಾಸಿಸುತ್ತಿರುವ ಸುಮಾರು 18,000 ಜನರನ್ನು ವಾಪಸ್ ಕರೆಸಿಕೊಳ್ಳಲು ಭಾರತ ಸಜ್ಜು!
ಅಮೆರಿಕಾದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಭಾರತೀಯ ನಾಗರಿಕರನ್ನು ವಾಪಸ್ ಭಾರತಕ್ಕೆ ಕರೆಸಿಕೊಳ್ಳಲು ಭಾರತ ಸಜ್ಜಾಗುತ್ತಿದೆ. ಅಮೆರಿಕಾದಲ್ಲಿ ವಲಸೆ ನಿರ್ಬಂಧಿಸುವ ಮತ್ತು ಸರಿಯಾದ ದಾಖಲೆಗಳು ಇಲ್ಲದೆ ವಾಸುತ್ತಿರುವ ಎಲ್ಲರನ್ನೂ ಗಡಿಪಾರು ಮಾಡುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನಗಳ ನಡುವೆ ಈ ಮಾತುಗಳು ಕೇಳಿ ಬರುತ್ತಿವೆ.
ಅಮೆರಿಕಾ,ಸುಮಾರು 18,000 ಭಾರತೀಯರನ್ನು ಗಡಿಪಾರು ಮಾಡಲು ಗುರುತಿಸಿದೆ ಎಂದು ವರದಿಯೊಂದು ತಿಳಿಸಿದೆ. ಅಮೆರಿಕಾದಲ್ಲಿ ಸರಿಯಾದ ದಾಖಲೆಗಳಿಲ್ಲದೆ ವಾಸಿಸುವ ಭಾರತೀಯರ ನಿಖರವಾದ ಸಂಖ್ಯೆ ಅಸ್ಪಷ್ಟವಾಗಿದೆ.