• 15 ಫೆಬ್ರವರಿ 2025

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ 2.0 ಸರ್ಕಾರದ ಮೊದಲ ದ್ವಿಪಕ್ಷೀಯ ಸಭೆ ಭಾರತ ಜತೆ!

 ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ 2.0 ಸರ್ಕಾರದ ಮೊದಲ ದ್ವಿಪಕ್ಷೀಯ ಸಭೆ ಭಾರತ ಜತೆ!
Digiqole Ad

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ 2.0 ಸರ್ಕಾರದ ಮೊದಲ ದ್ವಿಪಕ್ಷೀಯ ಸಭೆ ಭಾರತ ಜತೆ!

ವಾಷಿಂಗ್ಟನ್ : ಅತ್ಯಂತ ಮಹತ್ವದ ವಿದ್ಯಮಾನದಲ್ಲಿ ಡೊನಾಲ್ಡ್‌ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಸರ್ಕಾರದ ಮೊದಲ ದ್ವಿಪಕ್ಷೀಯ ಸಭೆ ಭಾರತದ ಜತೆ ನಡೆದಿದೆ. ಇದು ಐತಿಹಾಸಿಕ ಎಂದು ಬಣ್ಣಿಸಲಾಗಿದೆ. ಟ್ರಂಪ್ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ನೇಮಕಗೊಂಡಿರುವ ಮಾರ್ಕೋ ರುಬಿಯೋ ತಮ್ಮ ಮೊದಲ ದ್ವಿಪಕ್ಷೀಯ ಸಭೆಯನ್ನು ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಜೊತೆ ನಡೆಸಿದ್ದಾರೆ. ಇದನ್ನು ‘ಟ್ರಂಪ್‌ ಸರ್ಕಾರವು ಭಾರತಕ್ಕೆ ನೀಡುವ ಗೌರವ’ ಎಂದೂ ವಿಶ್ಲೇಷಿಸಲಾಗಿದೆ.ಅಮೆರಿಕದಲ್ಲಿ ಸಾಮಾನ್ಯವಾಗಿ ಸಂಪ್ರದಾಯದಂತೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಅಂತಾರಾಷ್ಟ್ರೀಯ ಸಭೆಯನ್ನು ನೆರೆಯ ಕೆನಡಾ, ಮೆಕ್ಸಿಕೋ ಅಥವಾ ನ್ಯಾಟೋ ರಾಷ್ಟ್ರಗಳೊಂದಿಗೆ ನಡೆಸುತ್ತದೆ. ಆದರೆ ಇದೇ ಮೊದಲ ಸಲ ಭಾರತದೊಂದಿಗೆ ನಡೆಸಿದೆ. ಹೀಗಾಗಿ ಐತಿಹಾಸಿಕ ಸಭೆ ಇದು ಎಂದು ಬಣ್ಣಿಸಲಾಗಿದೆ. ಟ್ರಂಪ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಜೈಶಂಕರ್‌ ಅಮೆರಿಕಕ್ಕೆ ತೆರಳಿದ್ದರು. ಬಳಿಕ ಈ ಮಹತ್ವದ ಸಭೆ ನಡೆಸಿದ್ದಾರೆ. ಮಾರ್ಕೋ ಜತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಜ್‌ ಕೂಡ ಇದ್ದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ಭಾರತ ಮತ್ತು ಅಮೆರಿಕದ ಕಾರ್ಯತಂತ್ರ ಪಾಲುದಾರಿಕೆ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.

 

Digiqole Ad

ಈ ಸುದ್ದಿಗಳನ್ನೂ ಓದಿ