ಮೈಕ್ರೋ ಫೈನಾನ್ಸ್ ಕಾಟ: ‘ಮಾಂಗಲ್ಯ ಉಳಿಸಿ’ ಎಂದು ಸಿಎಂ ಸಿದ್ಧರಾಮಯ್ಯಗೆ ಮನವಿ ಪತ್ರದ ಜತೆ ತಾಳಿ ಕಳುಹಿಸಿದ ಮಹಿಳೆ..!

ಮೈಕ್ರೋ ಫೈನಾನ್ಸ್ ಕಾಟ: ‘ಮಾಂಗಲ್ಯ ಉಳಿಸಿ’ ಎಂದು ಸಿಎಂ ಸಿದ್ಧರಾಮಯ್ಯಗೆ ಮನವಿ ಪತ್ರದ ಜತೆ ತಾಳಿ ಕಳುಹಿಸಿದ ಮಹಿಳೆ..!
ಹಾವೇರಿ: ಮೈಕ್ರೋ ಫೈನಾನ್ಶಿಯರ್‌ಗಳ ಕಿರುಕುಳವನ್ನು ತಪ್ಪಿಸಿ ರೈತ ಮಹಿಳೆಯರ ಮಾಂಗಲ್ಯ ಉಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರದ ಜತೆಗೆ ತಾಳಿ ರವಾನಿಸುವ ಮೂಲಕ ರಾಜ್ಯ ರೈತ ಸಂಘದ ರಾಣೇಬೆನ್ನೂರ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ರಾಣೇಬೆನ್ನೂರ ತಾಲೂಕಿನಾದ್ಯಂತ ಕೆಲ ಫೈನಾನ್ಸ್‌ಗಳು ಲೋನ್ ಕೊಟ್ಟು, ದುಪ್ಪಟ್ಟು ಬಡ್ಡಿ ವಸೂಲಿ ಮಾಡುತ್ತಿರುವುದಲ್ಲದೇ ಸಂಜೆ ವೇಳೆ, ರಾತ್ರಿ ಮನೆಯ ಮುಂದೆ ಸಾಲ, ಬಡ್ಡಿ ಕಟ್ಟುವಂತೆ ಕುಟುಂಬದವರನ್ನು ಅವಮಾನಗೊಳಿಸುತ್ತಾ ಮನೆಗೆ ಬೀಗ ಹಾಕುತ್ತೇವೆ. ಹರಾಜು ಮಾಡುತ್ತೇವೆ ಎಂದು ಗೂಂಡಾ ವರ್ತನೆ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಕೆಲವು ಹಳ್ಳಿಗಳ ಜನರು ಸಾಲದ ಕಿರಿಕಿರಿಯಿಂದ ಊರು ಬಿಟ್ಟು ಹೋಗಿದ್ದಾರೆ. ಕೆಲವರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ ಎಂದು ದೂರಿದರು. ಕಿರುಕುಳ ತಪ್ಪಿಸುವಂತೆ ಪತ್ರದಲ್ಲಿ ಉಲ್ಲೇಖ
ತಾಲೂಕು ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಫೈನಾನ್ಸ್ ವ್ಯಕ್ತಿಗಳನ್ನು ಕರೆಯಿಸಿ ನಿಯಮಾವಳಿಗಳ ಪ್ರಕಾರ ವಸೂಲಿ ಮಾಡುವಂತೆ ಸೂಚನೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಿಳೆಯರ ಕಷ್ಟ ಅರಿತುಕೊಂಡು ಮಾಂಗಲ್ಯ ಉಳಿಸಿ, ಫೈನಾನ್ಸ್‌ಗಳ ಕಿರುಕುಳ ತಪ್ಪಿಸಬೇಕು ಎಂದು ಪತ್ರಗಳಲ್ಲಿ ಉಲ್ಲೇಖಿಸಲಾಗಿದೆ.ಪ್ರತಿಭಟನೆಗೂ ಮೊದಲು ಸಂಘದಿಂದ ಎಸ್ಪಿ, ಡಿಸಿ ಕಚೇರಿಗೆ ಮನವಿ ಸಲ್ಲಿಸಲಾಯಿತು. ರೈತಕಾಣಿಯೂರು ಸವಣೂರು ರೈತ ಉತ್ಪಾದಕರ ಕಂಪೆನಿ ಕುದ್ಮಾರು ಸಂಘದ ರಾಣೆಬೆನ್ನೂರ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಶಿವಕುಮಾರ ತಳವಾರ, ಯಲ್ಲಪ್ಪ ಚಿಕ್ಕಣ್ಣನವರ, ಉಚ್ಚನಗೌಡ, ನೀಲಮ್ಮ ನಂದೆಣ್ಣನವರ, ರೂಪಾ ಕುಲಕರ್ಣಿ, ಶಿಲ್ಪಾ, ನಾಗಮ್ಮ ಮೊದಲಾದವರು ಇದ್ದರು.