ಚಾಮರಾಜನಗರ: ಎಸ್ಪಿ ಸಮ್ಮುಖದಲ್ಲಿ 1.38 ಕೋಟಿ ಮೌಲ್ಯದ 4 ಕ್ವಿಂಟಾಲ್ ಗಾಂಜಾ ನಾಶ
ಚಾಮರಾಜನಗರ: ಎಸ್ಪಿ ಸಮ್ಮುಖದಲ್ಲಿ 1.38 ಕೋಟಿ ಮೌಲ್ಯದ 4 ಕ್ವಿಂಟಾಲ್ ಗಾಂಜಾ ನಾಶ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಲ್ಲಿ ವಶಪಡಿಸಿಕೊಂಡಿದ್ದ 1.38 ಕೋಟಿ ಮೌಲ್ಯದ 4 ಕ್ವಿಂಟಾಲ್ ಗಾಂಜಾವನ್ನು ಚಾಮರಾಜನಗರ ಎಸ್ಪಿ ಡಾ. ಕವಿತಾ ಸಮ್ಮುಖದಲ್ಲಿ ನಾಶ ಪಡಿಸಲಾಯಿತು.
ಮೈಸೂರಿನ ಗುಜ್ಜೇಗೌಡನಪುರದಲ್ಲಿರುವ ಬಯೊಟೆಕ್ ಕುಲುಮೆಗೆ ಹಾಕಿ ಸುಡಲಾಗಿದೆ ಎಂದು ವರದಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಠಾಣೆಗಳಲ್ಲಿ ದಾಖಲಾಗಿ ನ್ಯಾಯಾಲಯಗಳಲ್ಲಿ ಆದೇಶವಾಗಿದ್ದ ಪ್ರಕರಣಗಳ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲು ಜಿಲ್ಲಾ ಮಾದಕವಸ್ತು ವಿಲೇವಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು, ಅದರಂತೆ ಚಾಮರಾಜನಗರ ಎಸ್ಪಿ ಸಮ್ಮುಖದಲ್ಲಿ ಬರೋಬ್ಬರಿ 4 ಕ್ವಿಂಟಾಲ್ ನಷ್ಟು ಗಾಂಜಾವನ್ನು ನಾಶಪಡಿಸಲಾಗಿದೆ.