ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ
ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ
ಪಡುಬಿದ್ರೆ: ಹಣದ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರವಾಗಿ ಯಕ್ಷಗಾನ ಕಲಾವಿದರೊಬ್ಬರನ್ನು ಮನೆಯಲ್ಲಿ ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ಪಡುಬಿದ್ರೆಯಲ್ಲಿ ನಡೆದಿದೆ.
ಪಡುಬಿದ್ರೆ ನಾಲು ಗ್ರಾಮದ ನಿತಿನ್ ಆಚಾರ್ಯ (31) ಹಲ್ಲೆಗೊಳಗಾಗಿರುವ ಕಲಾವಿದ.
ಪಾವಂಜೆ ಮೇಳದ ಕಲಾವಿದ ಸಚಿನ್ ಮತ್ತು ಮತ್ತೊಬ್ಬ ಅಪರಿಚಿತ ವ್ಯಕ್ತಿ ನಿತಿನ್ ಆಚಾರ್ಯ ಅವರನ್ನು ಮನೆಯಲ್ಲಿ ಕೂಡಿ ಹಾಕಿ, ಬೆತ್ತದಿಂದ ತಲೆಗೆ, ಕಾಲಿಗೆ ಹೊಡೆದು ಬಲಾತ್ಕಾರವಾಗಿ ಖಾಲಿ ಬಾಂಡ್ ಪೇಪರ್ ಗೆ ಸಹಿ ಪಡೆದುಕೊಂಡಿದ್ದಾರೆ. ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ನಿತಿನ್ ಅವರು ಚಿಕಿತ್ಸೆಗೊಳಗಾಗಿದ್ದಾರೆ.