ಮಹಾಕುಂಭಮೇಳದಲ್ಲಿ ರೀಲ್ಸ್ ಗಾಗಿ ದುಬೈ ಶೇಖ್ ವೇಷ ಧರಿಸಿದವನಿಗೆ ಬಿತ್ತು ಗೂಸಾ!
ಮಹಾಕುಂಭಮೇಳದಲ್ಲಿ ರೀಲ್ಸ್ ಗಾಗಿ ದುಬೈ ಶೇಖ್ ವೇಷ ಧರಿಸಿದವನಿಗೆ ಬಿತ್ತು ಗೂಸಾ!
ಪ್ರಯಾಗ್ ರಾಜ್: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ರೀಲ್ಸ್ ಮಾಡುವ ಗೀಳಿನಿಂದ ದುಬೈ ಶೇಖ್ ರೀತಿ ವೇಷ ಧರಿಸಿ ಬಂದು ಸಾಧುಗಳು ಹಾಗೂ ಸಾರ್ವಜನಿಕರಿಂದ ಗೂಸಾ ತಿಂದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ರೀಲ್ ಕ್ರಿಯೇಟರ್ ತನ್ನ ಇಬ್ಬರು ಗೆಳೆಯರ ಜೊತೆ ದುಬೈ ಶೇಖ್ ರೀತಿ ವೇಷ ಧರಿಸಿಕೊಂಡು ಪ್ರಯಾಗ್ ರಾಜ್ ದಾರಿಯಲ್ಲಿ ನಡೆದುಕೊಂಡು ಹೋಗುತ್ತಾ…ಮಾರ್ಗದಲ್ಲಿ ಸಿಕ್ಕಿದವರ ಜತೆ ತಾನು ದುಬೈ ಶೇಖ್ ಎಂಬುದಾಗಿ ಪರಿಚಯಿಸಿಕೊಳ್ಳುತ್ತಿದ್ದ. >
ಉದ್ದನೆಯ ಬಿಳಿ ನಿಲುವಂಗಿ, ಸಾಂಪ್ರದಾಯಿಕ ಅರೇಬಿಕ್ ತಲೆವಸ್ತ್ರ, ಕಪ್ಪು ಪಟ್ಟಿಯಿಂದ ಸುತ್ತಿಕೊಂಡು…ನಾನು ಶೇಖ್ ಪ್ರೇಮಾನಂದ ಎಂದು ಹೇಳಿ ರೀಲ್ಸ್ ಮಾಡುತ್ತಿದ್ದ. ಆದರೆ ಈ ಹೆಸರು ಜನರಲ್ಲಿ ಸಂಶಯ ಹುಟ್ಟುಹಾಕಿತ್ತು..ಆಗ ಜನರು ಆತನನ್ನು ಹಿಂಬಾಲಿಸಿ ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಯುವಕ ಮೂಲತಃ ರಾಜಸ್ಥಾನದವನಾಗಿದ್ದು, ರೀಲ್ಸ್ ಮಾಡುವ ಉದ್ದೇಶದಿಂದ ದುಬೈ ಶೇಖ್ ರೀತಿ ನಕಲಿ ವೇಷ ದರಿಸಿ ಮಹಾಕುಂಭಮೇಳಕ್ಕೆ ಆಗಮಿಸಿದ್ದ. ಆದರೆ ಪವಿತ್ರವಾದ ಕುಂಭಮೇಳದಲ್ಲಿ ಧರ್ಮವನ್ನು ಅಗೌರವಿಸುವ ರೀತಿಯಲ್ಲಿ ವೇಷಧರಿಸಿ ರೀಲ್ಸ್ ಮಾಡಲು ಬಂದಿದ್ದಕ್ಕೆ ಯುವಕನನ್ನು ಅಡ್ಡಗಟ್ಟಿ ಥಳಿಸಿರುವುದಾಗಿ ವರದಿ ತಿಳಿಸಿದೆ.