ಅರಂತೋಡು: ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ
ಅರಂತೋಡು: ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ
ಸುಳ್ಯ: ಆಟೋ ಚಾಲಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಂತೋಡಿನ ಅಡ್ಯಡ್ಕ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.
55 ವರ್ಷದ ಕಂದ ಸ್ವಾಮಿ ಎಂಬವರು ನೇಣಿಗೆ ಶರಣಾದ ವ್ಯಕ್ತಿ. ಕಂದ ಸ್ವಾಮಿಯವರು ನೇಣು ಬಿಗಿದುಕೊಂಡ ವಿಷಯ ಗೊತ್ತಾಗಿ ಮನೆಯವರು ಅವರನ್ನು ಹಗ್ಗದಿಂದ ಇಳಿಸಿ ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಬಂದರೂ ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.