ಗಗನಕ್ಕೇರಿದ ಬೆಳ್ಳುಳ್ಳಿ ದರ
ಗಗನಕ್ಕೇರಿದ ಬೆಳ್ಳುಳ್ಳಿ ದರ
ಬೆಂಗಳೂರು: ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆ ಕಂಡಿರುವುದು ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ.
ಬೆಳ್ಳುಳ್ಳಿ ದರ ಕೆಜಿಗೆ 350 ರೂಪಾಯಿಯಿಂದ 400 ರೂಪಾಯಿವರೆಗೆ ಏರಿಕೆಯಾಗಿದೆ, ಬೆಳ್ಳುಳ್ಳಿ ಬೆಲೆ ಮತ್ತಷ್ಟು ಏರಿಕೆ ಕಂಡಿರುವುದು ಗ್ರಾಹಕರಿಗೆ ಬೇಸರ ತಂದಿದೆ.
ಬೆಳ್ಳುಳ್ಳಿ ದರ ಏರಿಕೆಗೆ ಪ್ರಮುಖ ಕಾರಣ ರಾಜ್ಯದಲ್ಲಿ ಬೆಳೆ ಇಲ್ಲದಿರುವುದು, ಹೆಚ್ಚಿನ ರೈತರು ಬೆಳ್ಳುಳ್ಳಿ ಬೆಳೆ ಬೆಳೆದಿಲ್ಲ. ಇದರ ಜೊತೆ ಮಳೆಗಾಲದ ಸಮಯದಲ್ಲಿ ಕೆಲ ರೈತರ ಬೆಳೆ ನಾಶವಾಗಿದ್ದು ಇದಕ್ಕೆ ಇನ್ನೊಂದು ಪ್ರಮುಖ ಕಾರಣವಾಗಿದೆ.