ನಾಣಿಲ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ
ನಾಣಿಲ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನಾಣಿಲ ದಲ್ಲಿ 76ನೇ ವರ್ಷದ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಸಂತ ದಲಾರಿ ಧ್ವಜಾರೋಹಣವನ್ನು ಮಾಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಕಡಬ ಆರಕ್ಷಕ ಠಾಣೆಯ ಗಸ್ತು ಪೊಲೀಸ್ ಮಹೇಶ್ ಮಕ್ಕಳ ಸುರಕ್ಷತೆ ಮತ್ತು ಪೋಷಕರ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಸಭಾಧ್ಯಕ್ಷತೆ ವಹಿಸಿದ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಸಂತ ದಲಾರಿ ಗಣರಾಜ್ಯೋತ್ಸವದ ಬಗ್ಗೆ ಮಾತಾಡಿ ಅಖಂಡ ಭಾರತ ವಿಶ್ವಗುರುವಾಗಲಿ ಎಂದು ಶುಭ ಹಾರೈಸಿದರು. ಪುಟಾಣಿ ಮಕ್ಕಳು ಮತ್ತು ಸಹ ಶಿಕ್ಷಕರಾದ ಸುನಿಲ್ ಅವರು ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ಮಾತಾನಾಡಿದರು. ಕಾರ್ಯಕ್ರಮದಲ್ಲಿ ಕಾಣಿಯೂರು ಗ್ರಾಮ ಪಂಚಾಯತಿನ ಸದಸ್ಯರಾದ ತೇಜ ಕುಮಾರಿ ಉದಲಡ್ಡ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶೋಭಾ ಬಾಕಿಲ ,ವಿದ್ಯಾರ್ಥಿ ನಾಯಕಿಯಾದ ಅಸ್ಮಿತ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕ ವೃಂದ, ಪೋಷಕರು, ಭಾಗವಹಿಸಿದರು. ಮುಖ್ಯ ಗುರುಗಳಾದ ಪದ್ಮಯ ಗೌಡ ಪ್ರಾಸ್ತಾವಿಕ ದೊಂದಿಗೆ ಸ್ವಾಗತಿಸಿದರು.ಸಹ ಶಿಕ್ಷಕಿ ಮೋಹಿನಿ ಎನ್ ವಂದಿಸಿದರು. ಗೌರವ ಶಿಕ್ಷಕಿಯಾದ ಚೇತನ ಕಾರ್ಯಕ್ರಮ ನಿರೂಪಿಸಿದರು.