ಯುನಿಫೈಡ್ ಪೆನ್ಷನ್ ಸ್ಕೀಮ್ ಪ್ರಕಟಿಸಿದ ಕೇಂದ್ರ ಸರಕಾರ

ಯುನಿಫೈಡ್ ಪೆನ್ಷನ್ ಸ್ಕೀಮ್ ಪ್ರಕಟಿಸಿದ ಕೇಂದ್ರ ಸರಕಾರ
ನವದೆಹಲಿ: ಕೇಂದ್ರ ಸರಕಾರಿ ನೌಕರರಿಗೆ ಪಿಂಚಣಿ ವ್ಯವಸ್ಥೆಯಾಗಿ ಯುನಿಫೈಡ್ ಪೆನ್ಷನ್ ಸ್ಕೀಮ್ ಅನ್ನು ಜಾರಿಗೊಳಿಸುತ್ತಿರುವುದಾಗಿ ಸರಕಾರ ಅಧಿಕೃತವಾಗಿ ಪ್ರಕಟಿಸಿದೆ. ಕೇಂದ್ರ ಸರಕಾರ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಏಪ್ರಿಲ್ 1ರಿಂದ ಯೂನಿಫೈಡ್ ಪೆನ್ಷನ್ ಸ್ಕೀಮ್ ಜಾರಿಗೆ ಬರಲಿದೆ.
ನ್ಯಾಷನಲ್ ಪೆನ್ಷನ್ ಸಿಸ್ಟಂಗೆ ಜೋಡಿತವಾಗಿರುವ ಎಲ್ಲಾ ಕೇಂದ್ರ ಸರಕಾರಿ ನೌಕರರಿಗೆ ಯೂನಿಫೈಡ್ ಪೆನ್ಷನ್ ಸ್ಕೀಮ್ ಅನ್ವಯವಾಗುತ್ತದೆ.
ಈ ಪಿಂಚಣಿ ಯೋಜನೆಗೆ ಅರ್ಹರಾಗಬೇಕಾದರೆ ಸರಕಾರಿ ನೌಕರಿಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಬೇಕು. ಕನಿಷ್ಟ ಪಿಂಚಣಿ ರೂ.10,000 ಸಿಗುತ್ತದೆ.