• 7 ಫೆಬ್ರವರಿ 2025

ತಮ್ಮ ಸ್ಥಾನದಲ್ಲಿ ಕೂರದ, ಕಚೇರಿ ಬಿಟ್ಟು ತೆರಳುವ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೂತನ ಸುತ್ತೋಲೆಯಲ್ಲಿ ಖಡಕ್ ವಾರ್ನಿಂಗ್

 ತಮ್ಮ ಸ್ಥಾನದಲ್ಲಿ ಕೂರದ, ಕಚೇರಿ ಬಿಟ್ಟು ತೆರಳುವ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೂತನ ಸುತ್ತೋಲೆಯಲ್ಲಿ ಖಡಕ್ ವಾರ್ನಿಂಗ್
Digiqole Ad

ತಮ್ಮ ಸ್ಥಾನದಲ್ಲಿ ಕೂರದ, ಕಚೇರಿ ಬಿಟ್ಟು ತೆರಳುವ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೂತನ ಸುತ್ತೋಲೆಯಲ್ಲಿ ಖಡಕ್ ವಾರ್ನಿಂಗ್

ಸರಕಾರಿ ಅಧಿಕಾರಿಗಳು ಮತ್ತು ಸರಕಾರಿ ನೌಕರರು ಸರಿಯಾದ ಸಮಯಕ್ಕೆ ತಮ್ಮ ಕರ್ತವ್ಯದ ಸ್ಥಳಕ್ಕೆ ಆಗಮಿಸಬೇಕು ಮತ್ತು ಸೇವಾ ಅವಧಿಯಲ್ಲಿ ಕರ್ತವ್ಯ ಸ್ಥಳವನ್ನು ಬಿಟ್ಟು ಎಲ್ಲೂ ಹೊರಗೆ ಹೋಗುವ ಹಾಗೆ ಇಲ್ಲ. ಒಂದು ವೇಳೆ, ಕರ್ತವ್ಯ ನಿಮಿತ್ತ ಕಚೇರಿ ಬಿಟ್ಟು ಹೊರ ಹೋಗುವ ಸಂದರ್ಭ ಬಂದರೆ ಅದನ್ನು ಕಚೇರಿಯ ದಾಖಲೆಯಲ್ಲಿ ನಮೂದಿಸಿ ತೆರಳಬೇಕು ಎಂದು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.

ಈ ಬಗ್ಗೆ ಕರ್ನಾಟಕ ಸರಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆ. ಕಚೇರಿಯ ವೇಳೆಯಲ್ಲಿ ಅಧಿಕಾರಿಗಳು ಮತ್ತು ನೌಕರರು ಆಲಿಸಬೇಕಾದ ನಿಯಮಗಳ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ.

ತನ್ನ ಅಧಿಕಾರಿಗಳು ಮತ್ತು ನೌಕರರಿಗೆ ಈ ಸೂಚನೆಯನ್ನು ನೀಡಲಾಗಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದು ಈ ಸುತ್ತೋಲೆಯಲ್ಲಿ ಕಚೇರಿಯ ವೇಳೆಯಲ್ಲಿ ಅಧಿಕಾರಿಗಳು ಮತ್ತು ನೌಕರರು ಪಾಲಿಸಬೇಕಾದ ಮುಖ್ಯ ಸೂಚನೆಗಳ ಬಗ್ಗೆ ಖಡಕ್ ವಾರ್ನಿಂಗ್ ನೀಡಲಾಗಿದೆ.

ಅಧಿಕಾರಿಗಳು ಮತ್ತು ನೌಕರರು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು, ಸೇವಾ ನಿಯಮವನ್ನು ಸರಿಯಾಗಿ ಪಾಲಿಸಬೇಕು. ಆದರೆ, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮಯ ಪಾಲನೆ ಮಾಡದಿರುವುದು ಚಲನ ವಲನ ವಹಿಯನ್ನು ನಿರ್ವಹಿಸದೇ ಇರುವುದು. ಕರ್ತವ್ಯದ ಅವಧಿಯಲ್ಲಿ ಗುರುತಿನ ಚೀಟಿಯನ್ನು ಧರಿಸದಿರುವುದು, ಅಧಿಕಾರಿಗಳು ಮತ್ತು ಸಿಬ್ಬಂದಿಯ ಹೆಸರು ಹುದ್ದೆಯ ನಾಮಫಲಕಗಳನ್ನು ಅಳವಡಿಸದೆ ಇರುವ ಬಗ್ಗೆ ದೂರುಗಳು ಸ್ವೀಕೃತವಾಗಿರುವುದರಿಂದ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಲಾಗಿದೆ.

Digiqole Ad

ಈ ಸುದ್ದಿಗಳನ್ನೂ ಓದಿ