ಉತ್ತರಾಖಂಡ: ಇಂದಿನಿಂದ ಏಕರೂಪ ನೀತಿ ಸಂಹಿತೆ ಜಾರಿಗೆ; ಬಹುಪತ್ನಿತ್ವ ವಿಷೇಧ ಒಂದು ಮದುವೆ ಮಾತ್ರ ಮಾನ್ಯ. ಹಲಾಲ್, ಇದ್ದತ್ ನಿಷೇಧ ದತ್ತು ಪ್ರಕ್ರಿಯೆ ಸರಳ
ಉತ್ತರಾಖಂಡ: ಇಂದಿನಿಂದ ಏಕರೂಪ ನೀತಿ ಸಂಹಿತೆ ಜಾರಿಗೆ; ಬಹುಪತ್ನಿತ್ವ ವಿಷೇಧ ಒಂದು ಮದುವೆ ಮಾತ್ರ ಮಾನ್ಯ. ಹಲಾಲ್, ಇದ್ದತ್ ನಿಷೇಧ ದತ್ತು ಪ್ರಕ್ರಿಯೆ ಸರಳ
ಉತ್ತರಾಖಂಡದಲ್ಲಿ ಇಂದಿನಿಂದ ಏಕರೂಪ ನೀತಿ ಸಂಹಿತೆ ಜಾರಿಗೆ ಬರಲಿದೆ. ಜನವರಿ 27 ರಂದು ಮಧ್ಯಾಹ್ನ 12.30 ರ ನಂತರ ಉತ್ತರಾಖಂಡದಲ್ಲಿ ಯುಸಿಸಿ ಜಾರಿಗೆ ಬರಲಿದೆ. ಅದೇ ದಿನ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಯುಸಿಸಿ ಪೋರ್ಟಲ್ ಅನ್ನು ಸಹ ಉದ್ಘಾಟಿಸಲಿದ್ದಾರೆ.
ದೆಹಲಿಯಲ್ಲಿ ಚುನಾವಣಾ ಪ್ರಚಾರದ ನಂತರ ಶನಿವಾರ ಡೆಹ್ರಾಡೂನ್ ತಲುಪಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಯುಸಿಸಿ ಜಾರಿಗೆ ತರುವ ಬಗ್ಗೆ ಸುಳಿವು ನೀಡಿದರು. ಜನವರಿ 27 ರಂದು ಉತ್ತರಾಖಂಡದಲ್ಲಿ ಯುಸಿಸಿ ಜಾರಿಗೆ ಬರಲಿದೆ. ಉತ್ತರಾಖಂಡದಲ್ಲಿ ಯುಸಿಸಿ ಅನುಷ್ಠಾನಕ್ಕೆ ಸಿದ್ಧತೆಗಳು ಈಗ ಅಂತಿಮ ಹಂತದಲ್ಲಿವೆ. ಏಕರೂಪ ನಾಗರಿಕ ಸಂಹಿತೆಯ ಪೋರ್ಟಲ್ ಅನ್ನು ಸಿದ್ಧಪಡಿಸಲಾಗಿದೆ. ಇದಲ್ಲದೆ, ಯುಸಿಸಿ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ತರಬೇತಿಯನ್ನೂ ನೀಡಲಾಗಿದೆ.
ಒಟ್ಟಾರೆಯಾಗಿ, ಏಕರೂಪ ನಾಗರಿಕ ಸಂಹಿತೆಯ ಎಲ್ಲಾ ಪ್ರಕ್ರಿಯೆಗಳು ಈಗ ಬಹುತೇಕ ಪೂರ್ಣಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ, ಜನವರಿ 27 ರಂದು ಮಧ್ಯಾಹ್ನ 12.30 ರ ಸುಮಾರಿಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಿದ್ದಾರೆ.
ಬಹುಪತ್ನಿತ್ವ ವಿಷೇಧ, ಒಂದು ಮದುವೆ ಮಾತ್ರ ಮಾನ್ಯ. ಲಿವ್ ಇನ್ ರಿಲೇಶನ್‌ಶಿಪ್‌ಗೆ ಘೋಷಣೆ ಅಗತ್ಯ.
ಬಾಲಕಿಯರಿಗೂ ಆನುವಂಶಿಕ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಸಮಾನ ಪಾಲು. ದತ್ತು ಸ್ವೀಕಾರ ಎಲ್ಲರಿಗೂ ಮಾನ್ಯವಾಗಿರುತ್ತದೆ.
ಮುಸ್ಲಿಮರಿಗೂ ದತ್ತು ಪಡೆಯುವ ಹಕ್ಕು. ದತ್ತು ಪ್ರಕ್ರಿಯೆ ಸರಳ.
ಮುಸ್ಲಿಂ ಸಮುದಾಯದಲ್ಲಿ ನಡೆಯುವ ಹಲಾಲಾ ಮತ್ತು ಇದ್ದತ್‌ಗಳನ್ನು ನಿಷೇಧ. ಮದುವೆ ನೋಂದಣಿ ಕಡ್ಡಾಯ.
ಗ್ರಾಮದಲ್ಲಿಯೇ ವಿವಾಹ ನೋಂದಾವಣಿ. ನೋಂದಣಿ ಇಲ್ಲದೆ ನಡೆಯುವ ವಿವಾಹವನ್ನು ಅಮಾನ್ಯ. ಮದುವೆ ನೋಂದಾಯಿಸದಿದ್ದರೆ ಸರ್ಕಾರದಿಂದ ಯಾವುದೇ ಸೌಲಭ್ಯದ ಪ್ರಯೋಜನ ಸಿಗುವುದಿಲ್ಲ. ಯುಸಿಸಿಯಲ್ಲಿ ಜನಸಂಖ್ಯಾ ನಿಯಂತ್ರಣಕ್ಕೂ ಅವಕಾಶ.