ಚಿಕ್ಕಮಗಳೂರು: ಮತ್ತೆ ಇಬ್ಬರಲ್ಲಿ ಕಾಣಿಸಿಕೊಂಡ ಮಂಗನಕಾಯಿಲೆ
ಚಿಕ್ಕಮಗಳೂರು: ಮತ್ತೆ ಇಬ್ಬರಲ್ಲಿ ಕಾಣಿಸಿಕೊಂಡ ಮಂಗನಕಾಯಿಲೆ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮತ್ತಿಬ್ಬರಲ್ಲಿ ಮಂಗನಕಾಯಿಲೆ ರೋಗ ಕಾಣಿಸಿಕೊಂಡಿದೆ.ಈ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಎನ್ಆರ್ ಪುರ ತಾಲೂಕಿನ ಮೂವರಲ್ಲಿ, ಕೊಪ್ಪ ತಾಲೂಕಿನ ಇಬ್ಬರಲ್ಲಿ ಮತ್ತು ಚಿಕ್ಕಮಗಳೂರು ತಾಲೂಕಿನ ಓರ್ವನಲ್ಲಿ ಮಂಗನಕಾಯಿಲೆ ರೋಗವು ಕಾಣಿಸಿಕೊಂಡಿದೆ. ಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆ ಚಿಕಿತ್ಸೆಗೆಂದು ಆರೋಗ್ಯ ಇಲಾಖೆ ಕೆ ಎಫ್ ಡಿ ವಾರ್ಡ್ ತೆರೆದಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.