ಆರಿಕ್ಕಾಡಿ ಕೋಟೆಯೊಳಗೆ ಕಳವಿಗೆ ಯತ್ನ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್.ಒತ್ತಾಯ


ಆರಿಕ್ಕಾಡಿ ಕೋಟೆಯೊಳಗೆ ಕಳವಿಗೆ ಯತ್ನ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್.ಒತ್ತಾಯ
ಕಾಸರಗೋಡು: ಅತಿ ಪುರಾತನವಾದ ಹನುಮಾನ್ ಕ್ಷೇತ್ರ ಒಳಗೊಂಡಿರುವ ಆರಿಕ್ಕಾಡಿ ಕೋಟೆಯೊಳಗಿನ ಬಾವಿಯಲ್ಲಿ ನಿಧಿಯಿದೆಯೆಂದು ಅತಿಕ್ರಮಿಸಿ ಪ್ರವೇಶಿಸಿದ ಮುಸ್ಲಿಂ ಲೀಗ್ ನೇತಾರ, ಮೊಗ್ರಾಲು ಪುತ್ತೂರು ಗ್ರಾಮ ಪಂಚಾಯತು ಉಪಾಧ್ಯಕ್ಷ ಹಾಗೂ ಸ೦ಗಡಿಗರ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಬೇಕೆ೦ದು ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಕ.ಎಂ.ಎಲ್.ಒತ್ತಾಯಿಸಿದ್ದಾರೆ. ಆರೋಪಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಕೆಲಸ ಮಾಡಿದ್ದಾರೆ. ಈ ತಂಡಕ್ಕೆ ಇನ್ನೇನಾದರೂ ನಿಗೂಡ ಉದ್ದೇಶವಿತ್ತೇ ಎ೦ಬ ಬಗ್ಗೆಯೂ ತನಿಖೆ ನಡೆಸಬೇಕು. ಆರೋಪಿಗಳನ್ನು ಜಾಮೀನು ಮೂಲಕ ಬಿಡುಗಡೆ ಮಾಡಿರುವುದು ಸಹ ಶಂಕೆಗೆ ಕಾರಣವಾಗಿದೆ.
ಕುಂಬಳೆ ಆರಿಕ್ಕಾಡಿ ಕ್ಷೇತ್ರದ ಕಾಣಿಕೆ ಡಬ್ಬಿ ಕಳವು ಸಹಿತ ಹಲವು ಕಳವು ಪ್ರಕರಣಗಳ ತನಿಖೆ ಮೂಲೆಗುಂಪಾಗಿದೆ. ದೇವಸ್ಥಾನಗಳ ಸುರಕ್ಷೆ ಖಾತರಿಗೊಳಿಸುವಲ್ಲಿ ರಾಜ್ಯಾಡಳಿತ ಹಾಗೂ ಪೊಲೀಸ್ ಇಲಾಖೆ ವಿಫಲಗೊಂಡಿದೆ. ಈ ಪ್ರಕರಣದ ಮುಖ್ಯ ಆರೋಪಿ ಗ್ರಾಮ ಪಂಚಾಯತು ಉಪಾಧ್ಯಕ್ಷ ಮುಜೀಬ್ ರಹಿಮಾನ್ ನನ್ನು ವಜಾಗೈಯ್ಯಬೇಕು ಎಂದು ಅವರು ಒತ್ತಾಯಿಸಿದರು. ಇಲ್ಲವಾದಲ್ಲಿ ಸಾರ್ವಜನಿಕರನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಬೇಕಾದೀತು ಎಂದವರು ಎಚ್ಚರಿಕೆ ನೀಡಿದ್ದಾರೆ