ಕುಂಭಮೇಳದಲ್ಲಿ ಧರ್ಮ ಸ್ಲಂಸತ್ : ವಕ್ಸ್ ನಂತೆ ಸನಾತನ ಬೋರ್ಡ್ ರಚನೆಗೆ ಪ್ರಸ್ತಾವನೆ
ಕುಂಭಮೇಳದಲ್ಲಿ ಧರ್ಮ ಸ್ಲಂಸತ್ : ವಕ್ಸ್ ನಂತೆ ಸನಾತನ ಬೋರ್ಡ್ ರಚನೆಗೆ ಪ್ರಸ್ತಾವನೆ
ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಧರ್ಮ ಸಂಸತ್ತು ಆಯೋಜನೆ ಮಾಡಲಾಗಿದ್ದು, ದೇವಾಲಯಗಳ ಆಸ್ತಿ ನಿರ್ವಹಣೆಗಾಗಿ ಸನಾತನ ಬೋರ್ಡ್ ರಚನೆಗೆ ಪ್ರಸ್ತಾವನೆ ಮಂಡಿಸಲಾಗಿದೆ. ಈ ಪ್ರಸ್ತಾವಿತ ಮಂಡಳಿಯು ಸಾಕಷ್ಟು ಪುರಾವೆಗಳಿದ್ದಲ್ಲಿ ಯಾವುದೇ ಆಸ್ತಿಯನ್ನು ದೇವಸ್ಥಾನದ ಆಸ್ತಿ’ ಎಂದು ಘೋಷಿಸುವ ಅಧಿಕಾರ ಹೊಂದಿರುತ್ತದೆ. ‘ಸನಾತನ ಹಿಂದೂ ಮಂಡಳಿ ಕಾಯ್ದೆ’ ಎಂದು ಕರೆಯಲ್ಪಡುವ ಈ ಮಂಡಳಿಯ ವ್ಯಾಪ್ತಿ ಇಡೀ ದೇಶಕ್ಕೆ ವಿಸ್ತರಿಸಲಾಗುತ್ತದೆ. ದೇವಸ್ಥಾನದ ಆಸ್ತಿಗಳನ್ನು ಮಂಡಳಿಯ ಅನುಮತಿಯಿಲ್ಲದೆ ಮಾರಾಟ ಮಾಡಲು, ಗುತ್ತಿಗೆ ನೀಡಲು ಅಥವಾ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಕರಡು ಕಾನೂನಿನಲ್ಲಿ ಪ್ರಸ್ತಾಪಿಸಲಾಗಿದೆ.