• 10 ಫೆಬ್ರವರಿ 2025

ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಉದ್ಘಾಟನೆ ಫೆ.2ರಂದು

 ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಉದ್ಘಾಟನೆ ಫೆ.2ರಂದು
Digiqole Ad

ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಉದ್ಘಾಟನೆ ಫೆ.2ರಂದು

ಕಾಸರಗೋಡು: ಇಲ್ಲಿನ ನುಳ್ಳಿಪ್ಪಾಡಿಯ ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಅವರ ನೇತೃತ್ವದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು 2025 ಫೆ.2ರಂದು ಅಪರಾಹ್ನ 2 ಗಂಟೆಗೆ ಉದ್ಘಾಟನೆಯಾಗಲಿದೆ. ಅಪರಾಹ್ನ 2 ಗಂಟೆಗೆ ಸಾಹಿತಿ ವೆಂಕಟ್ ಭಟ್ ಎಡನೀರು ಅವರ ಅಧ್ಯಕ್ಷತೆಯಲ್ಲಿ ನೂತನ ಸಮಿತಿಯ ಸಮಾಲೋಚನಾ ಸಭೆ ನಡೆಯಲಿದೆ. 2.30ರಿಂದ ಪರಿಷತ್ತಿನ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ. ಶಿಕ್ಷಣ ತಜ್ಞ ವಿ. ಬಿ ಕುಳಮರ್ವ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಉದ್ಘಾಟಿಸಿದರು. ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯ್ಯಕಟ್ಟೆ, 

ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ರಾಧಾಕೃಷ್ಣ ಕೆ ಉಳಿಯತ್ತಡ್ಕ, ಬಾಲ ಮಧುರಕಾನನ, ಜಯಾನಂದ ಪೆರಾಜೆ, ಶಾಂತಾ ಪುತ್ತೂರು, ರೇಖಾ ಸುದೇಶ್ ರಾವ್, ವಿಶಾಲಾಕ್ಷ ಪುತ್ರಕಳ, ಸುಭಾಷಿಣಿ ಚಂದ್ರ ಕನ್ನಟಿಪಾರೆ, ಕೆ. ನರಸಿಂಹ ಭಟ್ ಏತಡ್ಕ, ಪ್ರದೀಪ್ ಬೇಕಲ್ ಭಾಗವಹಿಸುವರು. ಡಾ. ವಾಮನ್ ರಾವ್ ಬೇಕಲ್ ಪ್ರಾಸ್ತಾವಿಕವಾಗಿ ಮಾತನಾಡುವರು. ಬಳಿಕ ಸಾಹಿತಿ ವಿರಾಜ್ ಅಡೂರು ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಲಿದೆ. ಕವಿಗಳಾಗಿ ಕೆ ನರಸಿಂಹ ಭಟ್ ಏತಡ್ಕ, ಪ್ರಭಾವತಿ ಕೆದಿಲಾಯ ಪುಂಡೂರು, ಶಾರದಾ ಮುಳಿಯಾರ್ ಎಡನೀರು, ಸುಶೀಲಾ ಪದ್ಯಾಣ, ಪ್ರಮೀಳಾ ಚುಳ್ಳಿಕ್ಕಾನ, ನಿರ್ಮಲಾ ಶೇಷಪ್ಪ ಖಂಡಿಗೆ, ಶಶಿಕಲಾ ಟೀಚರ್ ಕುಂಬಳೆ, ಶಶಿ ಸಾಲಿಯಾನ್, ಗಾಯತ್ರಿ ಪಳ್ಳತ್ತಡ್ಕ, ಗೀತಾ ಮನೋಜ್, ಮೇಘಾ ಶಿವರಾಜ್, ಗಿರೀಶ್ ಪಿ ಎಂ ಕಾಸರಗೋಡು, ಅನ್ನಪೂರ್ಣ ಎನ್ ಕೆ ಕುತ್ತಾಜೆ, ಶುಭಾಷಿಣಿ ಚಂದ್ರ ಕನ್ನಟಿಪಾರೆ, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ಜ್ಯೋತ್ಸ್ನಾ ಕಡಂದೇಲು. ಪ್ರಿಯಾ ಬಾಯಾರ್, ರೇಖಾ ರೋಷನ್ ಕಾಸರಗೋಡು, ಚಂಚಲಾಕ್ಷಿ ಶ್ಯಾಮ್ ಪ್ರಕಾಶ್, ಅಶ್ವಿನಿ ರಜನೀಶ್ ಕಾಸರಗೋಡು, ಪದ್ಮಾವತಿ ಏದಾರು, ವನಜಾಕ್ಷಿ ಚಂಬ್ರಕಾನ, ಕಿಶನ್ ರಾಜ್, ಸಂಧ್ಯಾಗೀತ ಬಾಯಾರು ಭಾಗವಹಿಸುವರು. ಕನ್ನಡ ಭವನದ ನಿರ್ದೇಶಕ ಪ್ರೋ. ಎ ಶ್ರೀನಾಥ್, ಕಾರ್ಯದರ್ಶಿ ವಸಂತ ಕೆರೆಮನೆ, ವ್ಯಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು, ನಿವೃತ್ತ ಶಿಕ್ಷಕಿ ಸಂಧ್ಯಾರಾಣಿ ಟೀಚರ್ ಭಾಗವಹಿಸುವರು ಎಂದು ಡಾ. ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ