• 7 ಫೆಬ್ರವರಿ 2025

ISRO: ಇಸ್ರೋದಿಂದ ಐತಿಹಾಸಿಕ ಸಾಧನೆ; ಶ್ರೀಹರಿಕೋಟಾದಿಂದ GSLV-F15 ರಾಕೆಟ್‌ ಯಶಸ್ವಿ ಉಡಾವಣೆ

 ISRO: ಇಸ್ರೋದಿಂದ ಐತಿಹಾಸಿಕ ಸಾಧನೆ; ಶ್ರೀಹರಿಕೋಟಾದಿಂದ GSLV-F15 ರಾಕೆಟ್‌ ಯಶಸ್ವಿ ಉಡಾವಣೆ
Digiqole Ad

ISRO: ಇಸ್ರೋದಿಂದ ಐತಿಹಾಸಿಕ ಸಾಧನೆ; ಶ್ರೀಹರಿಕೋಟಾದಿಂದ GSLV-F15 ರಾಕೆಟ್‌ ಯಶಸ್ವಿ ಉಡಾವಣೆ 

ಅಮರಾವತಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬುಧವಾರ ಐತಿಹಾಸಿಕ ಸಾಧನೆ ಮಾಡಿದ್ದು, ಬೆಳಗ್ಗೆ 6:23ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್‌ -02 (NVS-02) ಹೊತ್ತ ಜಿಎಸ್‌ಎಲ್‌ವಿ-ಎಫ್ 15 (GSLV-F15) ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ನಡೆಸಿದ100ನೇ ಯೋಜನೆ ಇದಾಗಿದ್ದು, ಈ ಮೂಲಕ ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ.

ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ವಿ.ನಾರಾಯಣನ್ ಅವರಿಗೆ ಇದು ಮೊದಲ ಯೋಜನೆ ಎನ್ನುವುದು ವಿಶೇಷ. ಜತೆಗೆ ಈ ವರ್ಷದ ಇಸ್ರೋದ ಮೊದಲ ಉಡಾವಣೆ ಎನಿಸಿಕೊಂಡಿದೆ. 27.30 ಗಂಟೆಗಳ ಕ್ಷಣಗಣನೆ ಮುಗಿಯುತ್ತಿದ್ದಂತೆ 50.9 ಮೀಟರ್ ಎತ್ತರದ ರಾಕೆಟ್ ಶ್ರೀಹರಿಕೋಟಾದ 2ನೇ ಉಡಾವಣಾ ಪ್ಯಾಡ್‌ನಿಂದ ನಭಕ್ಕೆ ಚಿಮ್ಮಿತು.

 ಜಿಎಸ್ಎಲ್‌ವಿ-ಎಫ್ 15 ಯೋಜನೆ ಭಾರತದ ಜಿಎಸ್‌ಎಲ್‌ವಿಯ 15ನೇ ಹಾರಾಟವಾಗಿದ್ದು, ಭಾರತೀಯ ನಿರ್ಮಾಣದ ಕ್ರಯೋಜನಿಕ್ ಎಂಜಿನ್ ಬಳಸಿ ನಡೆಸಲಿರುವ 8ನೇ ಕಾರ್ಯಾಚರಣೆ ಎನಿಸಿಕೊಂಡಿದೆ.

 

Digiqole Ad

ಈ ಸುದ್ದಿಗಳನ್ನೂ ಓದಿ