• 10 ಫೆಬ್ರವರಿ 2025

ಕೊರಟಗೆರೆ : ನಿಲ್ಲದ ಮೈಕ್ರೋ ಫೈನಾನ್ಸ್ ಕಿರುಕುಳ… 30 ಬಿಪಿ ಮಾತ್ರೆ ನುಂಗಿ ಮಹಿಳೆ ಆತ್ಮಹತ್ಯೆಗೆ ಯತ್ನ

 ಕೊರಟಗೆರೆ : ನಿಲ್ಲದ ಮೈಕ್ರೋ ಫೈನಾನ್ಸ್ ಕಿರುಕುಳ… 30 ಬಿಪಿ ಮಾತ್ರೆ ನುಂಗಿ ಮಹಿಳೆ ಆತ್ಮಹತ್ಯೆಗೆ ಯತ್ನ
Digiqole Ad

ಕೊರಟಗೆರೆ : ನಿಲ್ಲದ ಮೈಕ್ರೋ ಫೈನಾನ್ಸ್ ಕಿರುಕುಳ… 30 ಬಿಪಿ ಮಾತ್ರೆ ನುಂಗಿ ಮಹಿಳೆ ಆತ್ಮಹತ್ಯೆಗೆ ಯತ್ನ

ಕೊರಟಗೆರೆ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಕಿರುಕುಳ ನಿಲ್ಲುವ ಲಕ್ಷಣ ಕಾಣುತ್ತಿಲ್ಲ, ಕೊರಟಗೆರೆಯಲ್ಲಿ ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಕಿರುಕುಳಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಅಲ್ಲಾಳಸಂದ್ರ ಹನುಮಂತಪುರದಲ್ಲಿ ಬುಧವಾರ(ಜ.29) ಬೆಳಕಿಗೆ ಬಂದಿದೆ.

ಹನುಮಂತಪುರ ನಿವಾಸಿಯಾಗಿರುವ ಮಂಗಳಮ್ಮ(45) ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ.

ಮಂಗಳಮ್ಮ ಒಂದು ವರ್ಷದ ಹಿಂದೆ ಹೋಟೆಲ್‌ ನಡೆಸಲು ಗ್ರಾಮೀಣಾ ಕೂಟದಲ್ಲಿ 2 ಲಕ್ಷ ಸಾಲ, ಎಲ್.ಎನ್ ಟಿ ಫೈನಾನ್ಸ್ ನಲ್ಲಿ 70 ಸಾವಿರ ಹಾಗೂ ಆಶೀರ್ವಾದ ಫೈನಾನ್ಸ್‌ ನಲ್ಲಿ 80 ಸಾವಿರ ಸಾಲ ಪಡೆದಿದ್ದಾರೆ ಎನ್ನಲಾಗಿದೆ ಆದರೆ ಕಾರಣಾಂತರಗಳಿಂದ ಹೋಟೆಲ್ ಮುಚ್ಚಲಾಯಿತು ಇದಾದ ಬಳಿಕ ಸಾಲ ತೀರಿಸಲು ಮಂಗಳಮ್ಮ, ಗಂಡ ಬಸವರಾಜು, ಮಗ ಪುನೀತ್ ಹರಸಾಹಸ ಪಟ್ಟು ಗ್ರಾಮೀಣ ಕೂಟದಲ್ಲಿ 40 ಕಂತು ಕಟ್ಟಿದ್ದಾರೆ. ಇನ್ನೂ 42 ಕಂತು ಹಣ ಬಾಕಿ ಉಳಿದಿತ್ತು. ಆದರೆ ಕಳೆದ ಎರಡು ದಿನಗಳಿಂದ ಬ್ಯಾಂಕ್ ಸಿಬ್ಬಂದಿಗಳು ಮನೆಯ ಬಳಿ ಬಂದು ಬಾಕಿ ಕಟ್ಟುವಂತೆ ಕಿರುಕುಳ ನೀಡಿದ್ದಾರೆ ಅದರಂತೆ ಬಾಕ್ ಸಿಬ್ಬಂದಿಗಳು ಇಂದು ಕೂಡಾ ಮನೆಯ ಬಳಿ ಬಂದ ಕಿರುಕುಳ ನೀಡುತ್ತಾರೆ ಎಂದು ಮರ್ಯಾದೆಗೆ ಅಂಜಿ ಮನೆಯಲ್ಲಿದ್ದ 30 ಬಿಪಿ ಮಾತ್ರಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಗಂಭೀರ ಸ್ಥಿತಿಯಲ್ಲಿದ್ದ ಮಂಗಳಮ್ಮ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸದ್ಯ ತುಮಕೂರು ಜಿಲ್ಲಾಸ್ಪತ್ರೆಯ ಐಸಿಯು ಘಟಕದಲ್ಲಿ ಮಂಗಳಮ್ಮ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಈ ಕುರಿತು ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Digiqole Ad

ಈ ಸುದ್ದಿಗಳನ್ನೂ ಓದಿ