ಪ್ರಯಾಣಿಕರ ಕೊರತೆ,ಆರ್ಥಿಕ ನಷ್ಟ:ಮುಚ್ಚುವ ಪರಿಸ್ಥಿತಿಯಲ್ಲಿ ಬೀದರ್ ಏರ್ಪೋರ್ಟ್!
ಪ್ರಯಾಣಿಕರ ಕೊರತೆ,ಆರ್ಥಿಕ ನಷ್ಟ:ಮುಚ್ಚುವ ಪರಿಸ್ಥಿತಿಯಲ್ಲಿ ಬೀದರ್ ಏರ್ಪೋರ್ಟ್!
ಬೀದರಿನಿಂದ ಬೆಂಗಳೂರಿಗೆ ಒಂದು ವರ್ಷದಿಂದ ವಿಮಾನ ಹಾರಾಟ ನಿಲ್ಲಿಸಿದ್ದು, ಇದೀಗ ಬೀದರ್ ವಿಮಾನ ನಿಲ್ದಾಣ ಮುಚ್ಚುವ ಎಲ್ಲಾ ಲಕ್ಷಣ ಗೋಚರಿಸುತ್ತಿವೆ.
ಪ್ರಯಾಣಿಕರ ಕೊರತೆ, ಆರ್ಥಿಕ ನಷ್ಟದಿಂದ ಟ್ರೂ ಜೆಟ್ ವಿಮಾನ ಕೆಲವು ತಿಂಗಳಲ್ಲಿಯೇ ತನ್ನ ಹಾರಾಟವನ್ನು ನಿಲ್ಲಿಸಿದೆ.
ಇಲ್ಲಿ ಸುಸ್ಸಜ್ಜಿತ ಏರ್ಪೋರ್ಟ್ ಇದ್ದರೂ ಜನರಿಗೆ ವಿಮಾನ ಸೌಲಭ್ಯ ಸಿಗದಂತಾಗಿದೆ, ಇದು ಅವರಲ್ಲಿ ನಿರಾಸೆ ಉಂಟು ಮಾಡಿದೆ. ಬೀದರ್ ನಲ್ಲಿ ವಿಮಾನ ಹಾರಾಟ ಸ್ಥಗಿತವಾಗಿದ್ದರಿಂದ ಜನರು ಕಲಬುರುಗಿ ಅಥವಾ ಹೈದರಾಬಾದಿಗೆ ಹೋಗಿ ವಿಮಾನದ ಮೂಲಕ ಬೆಂಗಳೂರಿಗೆ ತಲುಪುವ ಸ್ಥಿತಿ ಉಂಟಾಗಿದೆ.