ವೈದ್ಯಕೀಯ ಕೋರ್ಸ್ ಸೇರ ಬಯಸುವವರಿಗೆ ನೀಟ್ ಶುಭ ಸುದ್ದಿ
ವೈದ್ಯಕೀಯ ಕೋರ್ಸ್ ಸೇರ ಬಯಸುವವರಿಗೆ ನೀಟ್ ಶುಭ ಸುದ್ದಿ
ವೈದ್ಯಕೀಯ ಕೋರ್ಸ್ ಸೇರಬೇಕೆಂದು ಬಯಸುವ ಅಭ್ಯರ್ಥಿಗಳಿಗೆ ನೀಟ್ ಶುಭ ಸುದ್ದಿ ನೀಡಲಿದೆ. ಈ ವರ್ಷದಿಂದ 1.2 ಲಕ್ಷ ಎಂಬಿಬಿಎಸ್ ಸೀಟುಗಳು ಲಭ್ಯವಾಗಲಿದೆ. ಕಳೆದ ವರ್ಷ 117,950 ಸೀಟುಗಳು ಲಭ್ಯವಿದ್ದವು. ಮೂಲಗಳ ಪ್ರಕಾರ ಶೀಘ್ರದಲ್ಲಿ ನೀಟ್ ಯುಜಿ-2025ರ ಪರೀಕ್ಷೆಗೆ ನೋಂದಣಿ ನಡೆಯಲಿದೆ.
ಕಳೆದ ವರ್ಷ 24,06,079 ಅಭ್ಯರ್ಥಿಗಳು ನೀಟ್ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ವರ್ಷ ನೀಟ್ ಪರೀಕ್ಷೆಗೆ 25 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿಯಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಕಳೆದೊಂದು ದಶಕಗಳಿಂದ ಲಭ್ಯವಿರುವ ಎಂಬಿಬಿಎಸ್ ಸೀಟುಗಳ ಸಂಖ್ಯೆ ಶೇಕಡ 107 ರಷ್ಟು ಏರಿಕೆ ಕಂಡಿದೆ.