ಮಹಾಕುಂಭಮೇಳದಲ್ಲಿ ಕಾಲ್ತುಳಿತ, ಕರ್ನಾಟಕ ಮೂಲದ ನಾಗಸಾಧು ಸಾವು
ಮಹಾಕುಂಭಮೇಳದಲ್ಲಿ ಕಾಲ್ತುಳಿತ, ಕರ್ನಾಟಕ ಮೂಲದ ನಾಗಸಾಧು ಸಾವು
ಪ್ರಯಾಗ್ ರಾಜನ್ ಮಹಾಕುಂಭ ಮೇಳದಲ್ಲಿ ತ್ರಿವೇಣಿ ಸಂಗಮದ ಬಳಿ ಭೀಕರ ಕಾಲ್ತುಳಿತ ಸಂಭವಿಸಿ 30 ಭಕ್ತರು ಸಾವನಪ್ಪಿದ್ದರು. ಈ ಪೈಕಿ ಬೆಳಗಾವಿ ಮೂಲದ ನಾಲ್ವರು ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಇದೀಗ ಕರ್ನಾಟಕ ಮೂಲದ ನಾಗಸಾಧು ಒಬ್ಬರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಮೃತಪಟ್ಟ ನಾಗಸಾಧು ರಾಜನಾಥ್ ಎಂದು ಗುರುತಿಸಲಾಗಿದೆ.
ಮೃತಪಟ್ಟ ನಾಗಸಾಧು ರಾಜನಾಥ್ ಅವರು ಬಂಜಾರ ಗುರುಪೀಠದ ಪೀಠಾಧಿಪತಿ ಸರ್ಧಾರ್ ಸೇವಾಲಾಲ್ ಶ್ರೀ ಒಡನಾಡಿಯಾಗಿದ್ದರು. ಅವರು ಕಳೆದ ಏಳು ವರ್ಷಗಳಿಂದ ಚಿತ್ರದುರ್ಗದ ಬಂಜಾರ ಗುರುಪೀಠದಲ್ಲಿ ನೆಲೆಸಿದ್ದರು