• 8 ಫೆಬ್ರವರಿ 2025

ಫೆ. 2 ರಂದು ಕನ್ನಡ ಪುಸ್ತಕ ಪ್ರಾಧಿಕಾರದ ಬಹುನಿರೀಕ್ಷಿತ “ಮನೆಗೊಂದು ಗ್ರಂಥಾಲಯ ” ಲಕ್ಷ ಗ್ರಂಥಾಲಯಗಳ ಯೋಜನೆಯ ಪ್ರಚಾರ ಹಾಗೂ ಕರಪತ್ರ ಬಿಡುಗಡೆ

 ಫೆ. 2 ರಂದು ಕನ್ನಡ ಪುಸ್ತಕ ಪ್ರಾಧಿಕಾರದ ಬಹುನಿರೀಕ್ಷಿತ “ಮನೆಗೊಂದು ಗ್ರಂಥಾಲಯ ” ಲಕ್ಷ ಗ್ರಂಥಾಲಯಗಳ ಯೋಜನೆಯ ಪ್ರಚಾರ ಹಾಗೂ ಕರಪತ್ರ ಬಿಡುಗಡೆ
Digiqole Ad

ಫೆ. 2 ರಂದು ಕನ್ನಡ ಪುಸ್ತಕ ಪ್ರಾಧಿಕಾರದ ಬಹುನಿರೀಕ್ಷಿತ “ಮನೆಗೊಂದು ಗ್ರಂಥಾಲಯ ” ಲಕ್ಷ ಗ್ರಂಥಾಲಯಗಳ ಯೋಜನೆಯ ಪ್ರಚಾರ ಹಾಗೂ ಕರಪತ್ರ ಬಿಡುಗಡೆ

ಕಾಸರಗೋಡು : ಕಾಸರಗೋಡು ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಫೆಬ್ರವರಿ 2ರ ಅಪರಾಹ್ನ 1ಗಂಟೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಬಹುನಿರೀಕ್ಷಿತ “ಮನೆಗೊಂದು ಗ್ರಂಥಾಲಯ ” ಲಕ್ಷ ಗ್ರಂಥಾಲಯಗಳ ಯೋಜನೆಯ ಪ್ರಚಾರ ಹಾಗೂ ಕರಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಗಡಿನಾಡು ಕಾಸರಗೋಡಿನಲ್ಲಿ ಈ ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರದ ಅಧ್ಯಕ್ಷರಾದ ಡಾ. ಮಾನಸ ಇವರು ಕನ್ನಡ ಭವನ ಮತ್ತು ಕಾಸರಗೋಡಿನ ವಿವಿಧ ಸಂಸ್ಥೆಗಳನ್ನು ಸಂಪರ್ಕಿಸುವ ಉದ್ದೇಶವನ್ನು ಇಟ್ಟುಕೊಂಡು ಹಮ್ಮಿಕೊಂಡಿದ್ದಾರೆ. ಪ್ರಾಧಿಕಾರ ಅಧ್ಯಕ್ಷರಾದ ಡಾ. ಮಾನಸ ಲಕ್ಷ ಗ್ರಂಥಾಲಯ ಯೋಜನೆ, ಮನೆಗೊಂದು ಗ್ರಂಥಾಲಯ ರೂಪು ರೇಷೆ ವಿವರಿಸಲಿದ್ದಾರೆ, ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಗೆ ಪುಸ್ತಕ ನೀಡಿ ಗಡಿನಾಡು ಕಾಸರಗೋಡಿನಲ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅಥಿತಿಯಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ. ಆರ್. ಸುಬ್ಬಯ್ಯಕಟ್ಟೆ, ಭಾಗವಹಿಸಲಿದ್ದಾರೆ. ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ, ರವಿ ನಾಯ್ಕಪು, ಪ್ರದೀಪ್ ಬೇಕಲ್, ಅರಿಬೈಲ್ ಗೋಪಾಲ್ ಶೆಟ್ಟಿ ರಾಜೇಶ್ ಚಂದ್ರ ಕೆ. ಪಿ.ಜಯಾನಂದ ಕುಮಾರ್ ಹೊಸದುರ್ಗ, ಪ್ರಕಾಶ್ ಚಂದ್ರ ಕಾಸರಗೋಡು.ಶುಭಾಶಂಸನೆ ಗೈಯ್ಯಲಿದ್ದಾರೆ. ವಸಂತ ಕೆರೆಮನೆ ಸ್ವಾಗತಿಸಿ, ಅಖಿಲೇಶ್ ನಗುಮುಗಮ್ ನಿರೂಪಿಸಿ ಸಂಧ್ಯಾರಾಣಿ ಟೀಚರ್ ಧನ್ಯವಾದವೀಯಲಿದ್ದಾರೆ

Digiqole Ad

ಈ ಸುದ್ದಿಗಳನ್ನೂ ಓದಿ