ಕೇಂದ್ರ ಬಜೆಟ್ ಗೂ ಮುನ್ನ ವಾಣಿಜ್ಯ LPG ಸಿಲಿಂಡರ್ ದರ 7ರೂ. ಇಳಿಕೆ, ವಿಮಾನ ಇಂಧನ ದರದಲ್ಲಿ ಏರಿಕೆ
ಕೇಂದ್ರ ಬಜೆಟ್ ಗೂ ಮುನ್ನ ವಾಣಿಜ್ಯ LPG ಸಿಲಿಂಡರ್ ದರ 7ರೂ. ಇಳಿಕೆ, ವಿಮಾನ ಇಂಧನ ದರದಲ್ಲಿ ಏರಿಕೆ
ಹೊಸದಿಲ್ಲಿ : ಕೇಂದ್ರ ಬಜೆಟ್ ಮಂಡನೆಗೆ ಮುಂಚಿತವಾಗಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಗಳ ದರದಲ್ಲಿ 7ರೂ. ಇಳಿಕೆಯಾಗಿದ್ದು, ವಿಮಾನ ಇಂಧನದ ದರದಲ್ಲಿ (ಎಟಿಎಫ್) ಏರಿಕೆಯಾಗಿದೆ.. ಪರಿಷ್ಕೃತ ದರ ಶನಿವಾರದಿಂದಲೇ ಜಾರಿಗೆ ಬರಲಿದೆ. ಶನಿವಾರದಿಂದ ದಿಲ್ಲಿಯಲ್ಲಿ 19 ಕೆಜಿ ವಾಣಿಜ್ಯ LPG ಸಿಲಿಂಡರ್ ಚಿಲ್ಲರೆ ಮಾರಾಟದ ಬೆಲೆ 1,804 ರೂ.ಗಳ ಬದಲಿಗೆ 1,797ರೂ. ಆಗಿರಲಿದೆ.
ವಿಮಾನಗಳಲ್ಲಿ ಬಳಸುವ ಇಂಧನ (ಎಟಿಎಫ್) ದರವು ಪ್ರತಿ 1 ಸಾವಿರ ಲೀಟರ್ ಗೆ 5,078 (ಶೇ 5.6ರಷ್ಟು) ಏರಿಕೆ ಮಾಡಲಾಗಿದೆ. ಪರಿಷ್ಕೃತ ದರದಿಂದ ವಿಮಾನಗಳಲ್ಲಿ ಬಳಸುವ ಇಂಧನದ ದರ ದಿಲ್ಲಿಯಲ್ಲಿ 95,533ರೂ. ಮತ್ತು ಮುಂಬೈಯಲ್ಲಿ 84,511 ಆಗಿದೆ.